ಯೂಸರ್ಗಳ ನೆರವೇ ಇಲ್ಲದೇ ಬ್ಯಾಕ್ಗ್ರೌಂಡ್ನಲ್ಲಿ ವೆಬ್ ಪೇಜ್ ಓಪನ್ ಮಾಡಿ.. ಪ್ರಕಟಣೆಗಳ ಮೇಲೆ ಕ್ಲಿಕ್ ಮಾಡುತ್ತಾ ಮೊಬೈಲ್ ಡೇಟಾವನ್ನು ಖಾಲಿ ಮಾಡುತ್ತಿರುವ 16 ಆಪ್ಗಳನ್ನು ಗೂಗಲ್ ಪ್ಲೇಸ್ಟೋರ್ ಗುರುತಿಸಿ, ತೊಲಗಿಸಿದೆ. ಯೂಸರ್ಗಳು ಕೂಡ ತಮ್ಮ ಮೊಬೈಲ್ನಿಂದ ಇವುಗಳನ್ನು ಡಿಲೀಟ್ ಮಾಡುವಂತೆ ಸೂಚನೆ ನೀಡಿದೆ.
ಆಂಡ್ರಾಯ್ಡ್ ಯೂಸರ್ಗಳಿಗೆ ಗೂಗಲ್ ಪ್ರಮುಖ ಸೂಚನೆ ನೀಡಿದೆ. ಫೋನ್ ಬ್ಯಾಟರಿ, ಡೇಟಾವನ್ನು ಬೇಗ ಖಾಲಿ ಮಾಡುವ 16 ಆಪ್ಗಳನ್ನು ಪ್ಲೇ ಸ್ಟೋರ್(Google play store )ನಿಂದ ತೊಲಗಿಸಿದೆ. ಯೂಸರ್ಗಳು ಕೂಡ ತಮ್ಮ ಮೊಬೈಲ್ನಿಂದ ಇವುಗಳನ್ನು ಡಿಲೀಟ್ ಮಾಡುವಂತೆ ಸೂಚನೆ ನೀಡಿದೆ.
ಫ್ಲಾಶ್ಲೈಟ್+(flashlight +), ಹೈಸ್ಪೀಡ್ ಕೆಮರಾ(High Speed Camera), ಕ್ಯೂ ಆರ್ ರೀಡಿಂಗ್(QR Reading), ಯೂನಿಟ್ ಕನ್ವರ್ಟರ್ಸ್ (Unit Converters), ಸ್ಮಾರ್ಟ್ ಟಾಸ್ಕ್ ಮ್ಯಾನೇಜರ್(Smart Task Manager), ಬುಸನ್ ಬಸ್(Busan bus), ಜಾಯ್ ಕೋಡ್(Joy code), ಕರೆನ್ಸಿ ಕನ್ವರ್ಟರ್ (Currency Converter), ಕೆ ಡಿಕ್ಷನರಿ ( K Dictionary), ಕ್ವಿಕ್ ನೋಟ್ (Quick Note), ಎಜ್ಡಿಕಾ(Ez Dica), ಇನ್ಸ್ಟಾಗ್ರಾಮ್ ಪ್ರೊಫೈಲ್ ಡೌನ್ಲೋಡೆರ್ (Instagram profile downloader), ಎಜ್ ನೋಟ್ಸ್(Ez notes), ಕ್ಯಾಲೆಂಡರ್ ನೋಟ್ ಪ್ಯಾಡ್(Calendar note pad), ಫ್ಲಾಶ್ಲೈಟ್( Flash Light), ಎ ಕ್ಯಾಲ್ಕುಲೇಟರ್ (a calculator), ಇಮೇಜ್ ವೋಲ್ಟ್ (Image volt), ಡಿಎಕ್ಸ್ ಕ್ಲೀನ್ (DX clean)..
ಇವುಗಳು ಬಳಕೆದಾರರ ಅನುಮತಿ, ಅಗತ್ಯ ಇಲ್ಲದೇ, ಬ್ಯಾಕ್ಗ್ರೌಂಡ್ನಲ್ಲಿ ವೆಬ್ ಪೇಜ್ ಓಪನ್ ಮಾಡಿ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದೇವೆ ಎಂದು ಮೆಕಾಫೆ ಸೈಬರ್ ಸೆಕ್ಯೂರಿಟಿ ಸಂಸ್ಥೆ ಪ್ರಕಟಿಸಿದೆ. ಇದರಿಂದ ಫೋನ್ಗಳ ಬ್ಯಾಟರಿ ಖಾಲಿ ಆಗುವುದರ ಜೊತೆಗೆ ಡೇಟಾ ಕೂಡ ಬೇಗ ಮುಗಿಯುತ್ತದೆ ಎಂದು ಗೂಗಲ್ ತಿಳಿಸಿದೆ.