ಕಾಂತಾರ ಸಿನೆಮಾ ನಿರೀಕ್ಷೆ ಮೀರಿ ಸಕ್ಸಸ್ ಕಂಡಿದೆ. ಈವರೆಗೂ 250ಕೋಟಿ ರೂಪಾಯಿಗೂ ಹೆಚ್ಚು ಹಣ ಬಾಚಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿಯಲ್ಲೂ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ನೋಡಿದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಬಾಯಿಂದ ಬಾಯಿಗೆ ಕಾಂತಾರ ವೈಭವ ಹಬ್ಬಿ ದಿನೇ ದಿನೇ ಥೇಟರ್ ಗಳು ಹೌಸ್ ಫುಲ್ ಆಗುತ್ತಿದೆ. ಈ ತರದ ಸನ್ನಿವೇಶ ಬಹಳ ದಿನಗಳ ಬಳಿಕ ಚಿತ್ರರಂಗ ಕಾಣುತ್ತಿದೆ. ಸಹಜವಾಗಿಯೇ ಇದರ ಎಲ್ಲಾ ಕ್ರೆಡಿಟ್ ಸಲ್ಲಬೇಕಿರೋದು ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ.
ಟಾಲಿವುಡ್(Tollywood) ನಲ್ಲಿ ಮೆಗಾ ಹಿಟ್ ಕಂಡ ಕಾಂತಾರ (Kantara success meet)ಮೊನ್ನೆ ಹೈದರಾಬಾದ್ ನಲ್ಲಿ ಸಕ್ಸಸ್ ಮೀಟ್ ಮಾಡಿದೆ. ಈ ಸಂದರ್ಭದಲ್ಲಿ ರಿಷಬ್ ಜೊತೆ ಪ್ರಾಜೆಕ್ಟ್ ಮಾಡುವುದಾಗಿ ಮೆಗಾ ನಿರ್ಮಾಪಕ ಗೀತಾ ಆರ್ಟ್ಸ್ (Gita arts)ಮುಖ್ಯಸ್ಥ ಅಲ್ಲು ಅರವಿಂದ್ (Producer Allu Aravind ) ಘೋಷಣೆ ಮಾಡಿದ್ದರು. ಎಲ್ಲರೂ ಗೀತಾ ಆರ್ಟ್ಸ್ ಬ್ಯಾನರ್ ನಲ್ಲಿ ರಿಷಬ್ ನಟಿಸಬಹುದು ಎಂದೇ ಎನಿಸಿದ್ದರು.
ಆದರೆ, ಮೆಗಾಸ್ಟಾರ್ ಪುತ್ರ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (RamCharan) ಗಮನದಲ್ಲಿ ಇರಿಸಿಕೊಂಡು ಅಲ್ಲು ಅರವಿಂದ್ ಗೆ ರಿಷಬ್ ಒನ್ ಲೈನ್ ಸ್ಟೋರಿ ಹೇಳಿದ್ದು, ಅದು ಅಲ್ಲು ಅರವಿಂದ್ ಅವರಿಗೆ ಸಿಕ್ಕಾಪಟ್ಟೆ ಹಿಡಿಸಿದೆಯಂತೆ. ಈ ಸ್ಟೋರಿಗೆ ಬಡಾ ನಿರ್ಮಾಪಕ ಅಲ್ಲು ಅರವಿಂದ್ ಅಂಥವರೇ ಬೆಸ್ಟ್ ಎಂಬ ನಿರ್ಣಯಕ್ಕೆ ರಿಷಬ್ ಶೆಟ್ಟಿ (Rishabh Shetty )ಬಂದಿದ್ದಾರೆ. ಅಲ್ಲು ಅರವಿಂದ್ ಕೂಡ ಹ್ಯಾಪಿ ಆಗಿ ಓಕೇ ಮಾಡೇ ಬಿಡೋಣ ಎಂದು ಹೇಳಿದ್ದಾರೆ ಎನ್ನುವುದು ಟಾಕ್.
ಶೀಘ್ರ ರಾಮ್ ಚರಣ್ ಜೊತೆ ಮಾತನಾಡಿ ಪ್ರಾಜೆಕ್ಟ್ ಫೈನಲ್ ಮಾಡುವ ಸಂಭವ ಇದೆ.
ಸದ್ಯ ಶಂಕರ್ ನಿರ್ದೇಶನದ ಬಿಗ್ ಬಜೆಟ್ ಮೂವಿಯಲ್ಲಿ ರಾಮ್ ಚರಣ್ ಬ್ಯುಸಿ ಇದ್ದಾರೆ. ಇದು ಮುಗಿದ ಬಳಿಕ ಎಲ್ಲಾ ಓಕೆ ಆದಲ್ಲಿ ರಿಷಬ್ ಟಾಲಿವುಡ್ ಅಂಗಳಕ್ಕೆ ಡೈರೆಕ್ಟ್ ಎಂಟ್ರಿ ಕೊಡಲಿದ್ದಾರೆ.
ಕೆಜಿಎಫ್ ಯಶಸ್ಸಿನ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಗೆ ಟಾಲಿವುಡ್ ನಲ್ಲಿ ಬಂಪರ್ ಆಫರ್ ಸಿಕ್ಕಿತ್ತು. ಅದಾದ ಮೇಲೆ ಪ್ರಶಾಂತ್ ನೀಲ್ ತೆಲುಗಿನಲ್ಲೇ ಫುಲ್ ಬ್ಯುಸಿ ಇದ್ದಾರೆ. ಇದೀಗ ರಿಷಬ್ ಶೆಟ್ಟಿ ಸರದಿ.