ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ದಿನದಿಂದ ದಿನಕ್ಕೆ ವೀಕ್ಷಕರ ಕೂತುಹಲ ಕೆರಳಿಸುತ್ತಿದ್ದು, ಈ ವಾರಾಂತ್ಯಕ್ಕೆ ದೊಡ್ಮನೆಯಿಂದ ಕನ್ನಡ ಕಿರುತೆರೆ ಜನಪ್ರಿಯ ನಟಿ ನೇಹಾ ಗೌಡ ಎಲಿಮಿನೇಟ್ ಅಗಿ ಹೊರ ಬಂದಿದ್ದಾರೆ.
ಗೊಂಬೆ ಎಂದೇ ಫೇಮಸ್ ಆದ ನೇಹಾ ಗೌಡ 5ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿರೋದು ವಿಶೇಷವಾಗಿ ಅವರ ಫ್ಯಾನ್ಸ್ಗಳಿಗೆ ಖುಷಿ ನೀಡಿತ್ತು.
ನೇಹಾ ಅವರು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿಯೂ ಟಾಸ್ಕ್ ಗಳಲ್ಲಿ ಆಕ್ಟೀವ್ ಆಗಿರುತ್ತಿದ್ದ ಅವರು ಮನೆ ಮಂದಿಯೊಂದಿಗೂ ಒಳ್ಳೆಯ ಬಾಂಡ್ ಬೆಳಸಿಕೊಂಡಿದ್ದರು.
ಇನ್ನೂ ಕಳೆದ ವಾರ ನೇಹಾ ಮತ್ತು ಮಯೂರಿ ನಡುವೆ ಟಫ್ ಫೈಟ್ ಇತ್ತು. ಆದರೆ ಕಡಿಮೆ ವೋಟ್ನಿಂದ ಮಯೂರಿ ಹೊರ ನಡೆದಿದ್ದರು. ಆ ಮೂಲಕ ನೇಹಾಗೆ ಬೋನಸ್ ಆಗಿ ಒಂದು ವಾರ ತಮ್ಮನ್ನು ಪ್ರೂವ್ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ದುರಾದೃಷ್ಟವಶಾತ್ ನೇಹಾ ಪಾಲಿಗೆ ಈ ವಾರ ಬ್ಯಾಡ್ ಲಕ್ ಆಗಿದ್ದು, ಐದೇ ವಾರಕ್ಕೆ ಹೊರ ಬಂದಿದ್ದಾರೆ.