ADVERTISEMENT
40 ದಿನಗಳ ಅವಧಿಯಲ್ಲಿ ಭಾರತದಲ್ಲಿ 32 ಲಕ್ಷ ಮಂದಿ ವೈವಾಹಿಕ ಜೀವನಕ್ಕೆ (Marriage) ಕಾಲಿಡಲಿದ್ದಾರೆ.
ಈ ತಿಂಗಳ 4ರಿಂದ ಅಂದರೆ ನವೆಂಬರ್ 4ರಿಂದ ಡಿಸೆಂಬರ್ 14ರವರೆಗೆ (Marriage Season) 32 ಲಕ್ಷ ಮಂದಿ ಅಂದರೆ 16 ಲಕ್ಷ ಜೋಡಿ ಸತಿ-ಪತಿಗಳಾಗಿದ್ದಾರೆ.
ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (CAIT) ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಕಿ-ಅಂಶ ಸಿಕ್ಕಿದೆ.
ಮದುವೆ ಎಂದರೆ ಬಟ್ಟೆ, ಆಭರಣ ಖರೀದಿಯ ಜೊತೆಗೆ ಮದುವೆ ಊಟ, ಮದುವೆ ಸಮಾರಂಭದಲ್ಲಿ ಮನರಂಜನಾ ಕಾರ್ಯಕ್ರಮಗಳು ಹೀಗೆ ಬಗೆಬಗೆಯ ಖರ್ಚುಗಳಿರುತ್ತವೆ.
40 ದಿನಗಳ ಅವಧಿಯಲ್ಲಿ ಈ ಮದುವೆ ಸಮಾರಂಭಗಳಿಂದಾಗಿ 3 ಲಕ್ಷದ 75 ಸಾವಿರ ಕೋಟಿ ರೂಪಾಯಿ ಮೊತ್ತದ ವ್ಯಾಪಾರ-ವ್ಯವಹಾರ ಕೂಡಾ ಆಗಲಿದೆ ಎಂದು ಸಂಘಟನೆ ಊಹಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 25 ಲಕ್ಷ ಮಂದಿ ಮದುವೆ ಆಗಿದ್ದರು ಮತ್ತು ಆ ಮದುವೆ ಸಮಾರಂಭಗಳಿಂದ 3 ಲಕ್ಷ ಕೋಟಿ ರೂಪಾಯಯಷ್ಟು ವ್ಯಾಪಾರ ವ್ಯವಹಾರವಾಗಿತ್ತು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ 3.5 ಲಕ್ಷ ಮಂದಿ 40 ದಿನಗಳ ಅವಧಿಯಲ್ಲಿ ಮದುವೆ ಆಗಲಿದ್ದು, 75 ಸಾವಿರ ಕೋಟಿ ರೂಪಾಯಿ ಮೊತ್ತದ ಮದುವೆಗೆ ಸಂಬಂಧಿಸಿದ ವ್ಯಾಪಾರ-ವ್ಯವಹಾರ ಆಗುವ ಅಂದಾಜಿಸಿದೆ.
ADVERTISEMENT