ಡಿಜಿಟಲ್ ಹಣಕಾಸು ಸೇವೆಗಳನ್ನು (Digital Financial Services) ನೀಡುವ ಪೇಟಿಎಂ (Paytm) ನಷ್ಟ ಏರಿಕೆ ಆಗಿದೆ. ಪೇಟಿಎಂ ಮೂಲ ಸಂಸ್ಥೆ ಒನ್97 ಕಮ್ಯೂನಿಕೇಷನ್ (One97Communications) ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಅವಧಿಯಲ್ಲಿ 571 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
ಕಳೆದ ವರ್ಷ ಈ ಮೂರು ತಿಂಗಳ ಅವಧಿಯಲ್ಲಿ ಪೇಟಿಎಂ ಮಾತೃಸಂಸ್ತೆ 472 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.
ಆದರೆ ಇದೇ ಆರ್ಥಿಕ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿ ಹೋಲಿಸಿದರೆ ನಷ್ಟ ಇಳಿಕೆ ಆಗಿದೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ 644 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.
ಪೇಟಿಎಂ ಕಂಪನಿಯ ಆದಾಯ ಶೇಕಡಾ 76ರಷ್ಟು ಹೆಚ್ಚಳ ಆಗಿದೆ. ಕಳೆದ ವರ್ಷ 1,086 ಕೋಟಿ ರೂಪಾಯಿ ಆದಾಯ ಗಳಿಸಿದ್ದರೆ, ಈ ಬಾರಿ 1,914 ಕೋಟಿ ರೂಪಾಯಿ ಆದಾಯ ಗಳಿಸಿದೆ. ಕಳೆದ ತ್ರೈಮಾಸಿಕದಲ್ಲಿ 1,679 ಕೋಟಿ ರೂಪಾಯಿ ಆದಾಯ ಗಳಿಸಿದ್ದರೆ, ಈ ತ್ರೈಮಾಸಿಕದಲ್ಲಿ ಶೇಕಡಾ 14ರಷ್ಟು ಹೆಚ್ಚಳ ಆಗಿದೆ.
ಸಬ್ಸ್ಕ್ರಿಷನ್ ಮೂಲಕ ಆದಾಯ, ಬಿಲ್ ಪಾವತಿ ಹೆಚ್ಚಳ ಮತ್ತು ಸಾಲ ವಿತರಣೆಯಿಂದ ಸಿಗುತ್ತಿರುವ ಆದಾಯದಿಂದ ಹೆಚ್ಚಳಕ್ಕೆ ಕಾರಣ ಎಂದು ಕಂಪನಿ ಹೇಳಿದೆ.
ADVERTISEMENT
ADVERTISEMENT