2021-22ನೇ ಆರ್ಥಿಕ ವರ್ಷದಲ್ಲಿ ಇ-ಕಾಮರ್ಸ್ (E Commerce) ಕಂಪನಿ ಫ್ಲಿಪ್ಕಾರ್ಟ್ (Flipkart) ಬರೋಬ್ಬರೀ 7,800 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
2020-21ನೇ ಆರ್ಥಿಕ ವರ್ಷದಲ್ಲಿ ಫ್ಲಿಪ್ಕಾರ್ಟ್ 5,352 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.
ಫ್ಲಿಪ್ಕಾರ್ಟ್ ಇಂಟರ್ನೆಟ್ (ಆನ್ಲೈನ್ ಬ್ಯುಸಿನೆಸ್ ಕಂಪನಿ) 2020-21ರ ಅವಧಿಯಲ್ಲಿ 2,907 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಆದರೆ ಈ ನಷ್ಟದ ಪ್ರಮಾಣ 2021-22ರ ಅವಧಿಯಲ್ಲಿ 4,399 ಕೋಟಿ ರೂಪಾಯಿ ಏರಿಕೆ ಆಗಿದೆ.
ಫ್ಲಿಪ್ಕಾರ್ಟ್ ಗ್ರೂಪ್ನಲ್ಲಿ ಬರುವ ಮಿನ್ತ್ರಾ, ಇನ್ಸ್ಸ್ಟಾಕಾರ್ಟ್, ಬಿ2ಬಿ ಯುನಿಟ್, ಫ್ಲಿಪ್ಕಾರ್ಟ್ ಇಂಡಿಯಾ 2020-21ರ ಅವಧಿಯಲ್ಲಿ 2,445 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. 2021-22ರ ಅವಧಿಯಲ್ಲಿ ಆ ನಷ್ಟದ ಮೊತ್ತ 3,413 ಕೋಟಿ ರೂಪಾಯಿಗೆ ಹೆಚ್ಚಳ ಆಗಿದೆ.
ಫ್ಲಿಪ್ಕಾರ್ಟ್ ಆದಾಯ ಶೇಕಡಾ 20ರಷ್ಟು ಅಂದರೆ 61,836 ಕೋಟಿ ರೂಪಾಯಿಗೆ ಹೆಚ್ಚಳ ಆಗಿದೆ. ಫ್ಲಿಪ್ಕಾರ್ಟ್ ಇಂಟರ್ನೆಟ್ 10,660 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಸೆಪ್ಟೆಂಬರ್ ಕೊನೆ ವಾರದಲ್ಲಿ ಅಂದರೆ ಹಬ್ಬದ ಅವಧಿಯಲ್ಲಿ ಫ್ಲಿಪ್ಕಾರ್ಟ್ 24,800 ಕೋಟಿ ರೂಪಾಯಿ ಮೊತ್ತದ ಉತ್ಪನ್ನಗಳನ್ನು ಮಾರಾಟ ಮಾಡಿದೆ.
ADVERTISEMENT
ADVERTISEMENT