ಗುಜರಾತ್ನಲ್ಲಿ ಆಮ್ ಆದ್ಮಿ ಪಾರ್ಟಿ ಪಕ್ಷದ ಐವರೂ ಶಾಸಕರು ಬಿಜೆಪಿ ಸೇರುವ ನಿರೀಕ್ಷೆ ಇದೆ. ಜುನಾಗಢ್ ಜಿಲ್ಲೆಯ ವಿಸವದರ್ ಶಾಸಕ ಭೂಪತ್ಭಾಯ್ ಭಯಾನಿ ಕೆಲವೇ ದಿನಗಳಲ್ಲಿ ಬಿಜೆಪಿ ಸೇರಲಿದ್ದಾರೆ.
ಇವರ ಜೊತೆಗೆ ಬೋತಾದ್ ಶಾಸಕ ಮಕ್ವಾನಾ ಉಮೇಶ್ ನರನ್ಭಾಯ್ಚ್, ಡೆಡಿಯಾಪಾಡಾ ಶಾಸಕ ಚೈತರ್ಭಾಯ್ ವಸವಾ, ಗರಿಯಾಧರ್ ಶಾಸಕ ಸುಧೀರ್ಭಾಯ್ ವಘಾನಿ, ಜಂಜೋಧ್ಪುರ್ ಅಹಿರ್ ಹೇಮಂತ್ಭಾಯ್ ಕೂಡಾ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಆಮ್ ಆದ್ಮಿ ಪಾರ್ಟಿಯ ಈ ಐವರೂ ಶಾಸಕರು ಬಿಜೆಪಿಗೆ ಸೇರಿದರೆ ಅಥವಾ ಬಿಜೆಪಿಗೆ ಬೆಂಬಲ ಕೊಟ್ಟರೆ ಆಮ್ ಆದ್ಮಿ ಪಾರ್ಟಿಗೆ ಅತೀ ದೊಡ್ಡ ರಾಜಕೀಯ ಹಿನ್ನಡೆ ಆಗಲಿದೆ.
ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಐವರು ಶಾಸಕರು ಆಯ್ಕೆ ಆಗಿದ್ದರು ಮತ್ತು ಶೇಕಡಾ 13ರಷ್ಟು ಶೇಕಡಾವಾರು ಮತಗಳನ್ನೂ ಪಡೆದಿತ್ತು.
182 ಶಾಸಕರ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 156, ಕಾಂಗ್ರೆಸ್ 17 ಮತ್ತು ಆಮ್ನ ಐವರು ಶಾಸಕರಿದ್ದಾರೆ.
ಚುನಾಯಿತ ಸರ್ಕಾರದ ಜೊತೆಗೆ ನನಗೆ ನಂಟು ಇಲ್ಲದೇ ಹೋದರೆ ನನ್ನ ವಲಯದಲ್ಲಿ ರೈತರಿಗೆ ಮತ್ತು ವರ್ತಕರಿಗೆ ಹೊಸ ನೀತಿಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಗುಜರಾತ್ನ ಫಲಿತಾಂಶ ಮತದಾರರು ಪ್ರಧಾನಿ ಮೋದಿ ಅವರನ್ನು ಇಷ್ಟಪಡುತ್ತಾರೆ ಎನ್ನುವುದನ್ನು ತೋರಿಸುತ್ತದೆ. ಗುಜರಾತಿಯಾಗಿ ನನಗೆ ಇಡೀ ವಿಶ್ವದಲ್ಲೇ ಮೋದಿ ಹೆಸರು ಪ್ರಸಿದ್ಧಿ ಆಗಿದ್ದಕ್ಕೆ ಹೆಮ್ಮೆ ಇದೆ, ನಾನು ಯಾವುದೇ ಪಕ್ಷಕ್ಕೆ ಸೇರಿದ್ದರೂ. ಒಂದು ವೇಳೆ ನಾನು ಬಿಜೆಪಿಗೆ ಸೇರಿದರೆ ಅಭಿವೃದ್ಧಿಗಾಗಿ ಬಿಜೆಪಿ ಸೇರಿದೆ ಎಂದು ಎಂದು ಜನ ಭಾವಿಸುತ್ತಾರೆ
ಎಂದು ಆಪ್ ಶಾಸಕ ಭೂಪತ್ಭಾಯ್ ಭಯಾನಿ ಹೇಳಿದ್ದಾರೆ.