ಮಹಾರಾಷ್ಟ್ರದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಹಾ ವಿಕಾಸ ಅಗಾಡಿ (ಮಹಾ ವಿಕಾಸ ಮೈತ್ರಿಕೂಟ) ಮೇಲುಗೈ ಸಾಧಿಸಿದೆ.
ರಾಜ್ಯದ 7,751 ಗ್ರಾಮ ಪಂಚಾಯತ್ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
ಮಹಾ ವಿಕಾಸ ಮೈತ್ರಿಕೂಟದಲ್ಲಿ ಎನ್ಸಿಪಿ 1,563 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 1,001 ಸ್ಥಾನಗಳನ್ನು ಗೆದ್ದಿದೆ. ಶಿವಸೇನೆ ಉದ್ಧವ್ ಠಾಕ್ರೆ ಬಣ 726 ಸ್ಥಾನಗಳನ್ನು ಗೆದ್ದಿದೆ.
ಮಹಾ ವಿಕಾಸ ಮೈತ್ರಿಕೂಟ ಒಟ್ಟು 3,250 ಸ್ಥಾನಗಳನ್ನು ಗೆದ್ದಿದೆ.
ಎನ್ಡಿಎ ಮೈತ್ರಿ ಕೂಟ ಒಟ್ಟು 3,139 ಸ್ಥಾನಗಳನ್ನು ಗೆದ್ದಿದೆ. ಇದರಲ್ಲಿ ಬಿಜೆಪಿ 2,318 ಸ್ಥಾನಗಳನ್ನು ಗೆದ್ದುಕೊಂಡಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ 821 ಸ್ಥಾನಗಳನ್ನು ಗೆದ್ದುಕೊಂಡಿದೆ.
ಇತರರು 1,362 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.
ADVERTISEMENT
ADVERTISEMENT