ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲೇ ಆಡಳಿತ ಪಕ್ಷ ಬಿಜೆಪಿಗೆ ಹೀನಾಯ ಸೋಲಿನ ಆತಂಕ ಎದುರಾಗಿದೆ.
ಬಿಜೆಪಿ ನಡೆಸಿರುವ ಆಂತರಿಕ ಸಮೀಕ್ಷೆ, ಬಿಜೆಪಿ ಮಾತೃಸಂಘಟನೆ ಆರ್ಎಸ್ಎಸ್ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಸೀಟುಗಳ ನಷ್ಟ ಆಗಲಿದೆ ಎಂದು ಅಂದಾಜಿಸಲಾಗಿದೆ.
ಆರ್ಎಸ್ಎಸ್ ಸಮೀಕ್ಷೆ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 60ರಿಂದ 65 ಸೀಟುಗಳು ಬರಬಹುದು ಎಂದು ಅಂದಾಜಿಸಲಾಗಿದೆ.
2018ರ ಚುನಾವಣೆಯಲ್ಲಿ ಬಿಜೆಪಿ 104 ಸೀಟುಗಳನ್ನು ಗೆದ್ದಿತ್ತು. ಆಪರೇಷನ್ ಕಮಲದ ಬಳಿಕ ಉಪ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನ ಗೆದ್ದಿದ್ದರಿಂದ ಬಿಜೆಪಿ ಬಲ ವಿಧಾನಸಭೆಯಲ್ಲಿ 117ಕ್ಕೆ ಏರಿಕೆ ಆಗಿತ್ತು.
ಅಂದರೆ ಆರ್ಎಸ್ಎಸ್ ಸಮೀಕ್ಷೆಯ ಪ್ರಕಾರ ಬಿಜೆಪಿಗೆ 57ಕ್ಕೂ ಅಧಿಕ ಸ್ಥಾನಗಳು ನಷ್ಟ ಆಗುವ ಸಾಧ್ಯತೆ ಇದೆ.
ಬಿಜೆಪಿ ಸಮೀಕ್ಷೆ:
ಇನ್ನು ಬಿಜೆಪಿಯೇ ಪ್ರತ್ಯೇಕವಾಗಿ ನಡೆಸಿರುವ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಪಕ್ಷದ ಸದ್ಯದ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಬಿಜೆಪಿ ಆಂತರಿಕ ಸಮೀಕ್ಷೆ ಪ್ರಕಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ 50ರಿಂದ 55 ಸೀಟುಗಳಷ್ಟೇ ಬರಬಹುದು ಲೆಕ್ಕ ಸಿಕ್ಕಿದೆ.
ಈ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ ಬರೋಬ್ಬರೀ 60ಕ್ಕೂ ಅಧಿಕ ಸೀಟುಗಳ ನಷ್ಟ ಅನುಭವಿಸುವ ಸಾಧ್ಯತೆ ಇದೆ.
ಮಹತ್ವ ಪಡೆದ ಸಿ ಟಿ ರವಿ ಹೇಳಿಕೆ:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿ ಟಿ ರವಿ ಅವರ ಪ್ರಕಾರ ಸದ್ಯಕ್ಕೆ ಬಿಜೆಪಿಗೆ ಗೆಲುವು ಖಚಿತವಾಗಿರುವ ಕ್ಷೇತ್ರಗಳು 60 ರಿಂದ 65 ಮಾತ್ರ.
ಎ ವರ್ಗದಲ್ಲಿ 60ರಿಂದ 65 ಸೀಟುಗಳನ್ನು ಬಿಜೆಪಿ ಗೆಲ್ಲುವುದು ಪಕ್ಕಾ ಆಗಿದೆ. ಇದು ಬಿಜೆಪಿ ಗೆಲ್ಲುವ ಕ್ಷೇತ್ರಗಳು. ಬಿ ವರ್ಗದಲ್ಲಿ 25ರಿಂದ 35 ಸೀಟುಗಳಿದ್ದು ಇವುಗಳ ಮೇಲೆ ಹೆಚ್ಚು ಶ್ರಮ ಹಾಕಬೇಕಿದೆ. ಸಿ ಮತ್ತು ಡಿಯಲ್ಲಿರುವ ಕ್ಷೇತ್ರಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಕ್ಷೇತ್ರಗಳು
ಎಂದು ಸಿ ಟಿ ರವಿ ಹೇಳಿದ್ದಾರೆ.
ಈ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಬಿಜೆಪಿಗೆ ಈಗ ಗೆಲ್ಲಬಹುದು ಎಂದು ಖಾತ್ರಿ ಆಗಿರುವ ಕ್ಷೇತ್ರಗಳು 65 ಅಷ್ಟೇ.
ಕಾಂಗ್ರೆಸ್ ಲೆಕ್ಕಾಚಾರ:
ಕಾಂಗ್ರೆಸ್ ಲೆಕ್ಕಾಚಾರ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್ 135 ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ನಾನು ಎರಡು ಬಾರಿ ಸಮೀಕ್ಷೆ ಮಾಡಿಸಿದ್ದೇನೆ, 160 ಸೀಟು ಬರುತ್ತೆ. 135 ಸೀಟಂತೂ ಬಂದೇ ಬರುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ.
ADVERTISEMENT
ADVERTISEMENT