ಜನಸಾಮಾನ್ಯರಿಗೆ ಭಾರತದ ಸರ್ವೋಚ್ಛ ಬ್ಯಾಂಕ್ ಆರ್ಬಿಐ ಆಘಾತ ನೀಡಿದೆ. ಇವತ್ತು ತನ್ನ ಹಣಕಾಸು ನೀತಿ ಪ್ರಕಟಿಸಿದ ಆರ್ಬಿಐ ರೆಪೋ ದರವನ್ನು ಶೇಕಡಾ 0.25ರಷ್ಟು ಹೆಚ್ಚಳ ಮಾಡಿದೆ.
ರೆಪೋ ದರ ಹೆಚ್ಚಳದಿಂದ ಬ್ಯಾಂಕ್ಗಳು ನೀಡುವ ವೈಯಕ್ತಿಕ ಸಾಲ, ಮನೆ ಸಾಲ, ಆಭರಣ ಸಾಲ, ವಾಹನ ಸಾಲ ಒಳಗೊಂಡಂತೆ ಎಲ್ಲ ಸಾಲದ ಮೇಲಿನ ಬಡ್ಡಿ ದರವನ್ನೂ ಬ್ಯಾಂಕುಗಳು ಏರಿಕೆ ಮಾಡಲಿವೆ.
ಮಾಸಿಕ ಸಾಲ ಕಂತು (EMI) ದುಬಾರಿ ಆಗಲಿದೆ.
ಸತತ ಆರನೇ ಬಾರಿ ಆರ್ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದೆ ಅಂದರೆ ರೆಪೋ ಶೇಕಡಾ 2.5ರಷ್ಟು ದುಬಾರಿ ಆಗಿದೆ.
ರೆಪೋ ದರ ಎಂದರೆ ಭಾರತದ ವಾಣಿಕ್ಯ ಬ್ಯಾಂಕುಗಳಿಗೆ ಆರ್ಬಿಐ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿ ದರ.
ಇವತ್ತಿನ ರೆಪೋ ದರ ಏರಿಕೆಯೊಂದಿಗೆ ಶೇಕಡಾವಾರು ರೆಪೋ ದರ ಶೇಕಡಾ 6.5ಕ್ಕೆ ಏರಿಕೆ ಆಗಿದೆ.
ಆರ್ಬಿಐ ರೆಪೋ ದರ ಹೆಚ್ಚಳ ಮಾಡಿದ ಕೂಡಲೇ ಬ್ಯಾಂಕುಗಳೂ ಕೂಡಾ ತಮ್ಮ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುವ ಸಲುವಾಗಿ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡುವುದು ವಾಡಿಕೆ.
ADVERTISEMENT
ADVERTISEMENT