ADVERTISEMENT
ADVERTISEMENT
ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಮಂಡ್ಯ ಹೆದ್ದಾರಿ ಬಳಿ ಅನೇಕ ಬೀದಿನಾಯಿಗಳನ್ನು ಹಿಡಿದಿತ್ತು.
ಆದರೆ ಈ ಬೀದಿನಾಯಿಗಳಲ್ಲಿ ಪೈಕಿ ಒಂದು ಬೀದಿನಾಯಿ ಉಸಿರುಗಟ್ಟಿ ಸತ್ತು ಹೋಗಿದೆ.
ಈ ಬಗ್ಗೆ ಮೈಸೂರು ನಿವಾಸಿ ಸುಪ್ರೀತ್ ನಾರಾಯಣ್ ಸುರೇಶ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ವೀಡಿಯೋವನ್ನೂ ಹಂಚಿಕೊಂಡಿದ್ದಾರೆ.
ಇವರ ಫೇಸ್ಬುಕ್ ಪೋಸ್ಟ್ನ್ನು ನಟಿ ಐಂದ್ರಿತಾ ರೇ ಮತ್ತು ಸಿನಿಮಾ ನಿರ್ದೇಶಕ ಕೆ ಎಂ ಚೈತನ್ಯ ಅವರು ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಮಂಡ್ಯ ಹೆಲಿಪ್ಯಾಡ್ ನಲ್ಲಿ ಇಳಿಯಲಿದ್ದಾರೆ ಅಂತ ನೆರೆಯ ಮೈಸೂರು ನಗರ ಪಾಲಿಕೆ ಮಂಡ್ಯದಲ್ಲಿನ ಹೆದ್ದಾರಿ ಸಮೀಪದಲ್ಲಿನ ಅನೇಕ ಬೀದಿ ನಾಯಿಗಳನ್ನು 🐕🐶 ಹಿಡಿದರು.
ಅದನ್ನು ಎಲ್ಲಿಡಬೇಕು ಎನ್ನುವ ಆದೇಶ ಸಂಜೆಯವರೆಗೂ ಅಧಿಕಾರಿ ನೀಡಲಿಲ್ಲ. ಅದನ್ನು ಸುಮಾರು 6 ಘಂಟೆಯ ಕಾಲ ಬಲೆಯಲ್ಲೆ ಹಿಡಿದಿಟ್ಟ ಕಾರಣ. ಒಂದು 7 ವರ್ಷದ ನಾಯಿ ಉಸಿರುಗಟ್ಟಿ ಸತ್ತಿದೆ, ಇದಕ್ಕೆ ನೇರವಾಗಿ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಹಾಗೂ ಆಯುಕ್ತರೇ ಕಾರಣ, ಕಾಣದ ಕೈ ಆದೇಶ ನೀಡಿದೆ.
ಅಲ್ಲೇ ಹುಟ್ಟಿ ಅಲ್ಲೇ ಬೆಳೆದ 7 ವರ್ಷದ ಬೀದಿ ನಾಯಿಗೆ , 5 ನಿಮಿಷದ Road Show ಸಾವಾಗಿ ಪರಿಣಮಿಸಿತು.
ಪ್ರತಿ ಬಾರಿ ಯಾವುದೇ ಪಕ್ಷದ ಒಬ್ಬ ಮಂತ್ರಿ ಬಂದರೆ ಅಲ್ಲಿನ ಸುತ್ತ ಮುತ್ತಲಿನ ನಾಯಿಗಳನ್ನು ಹೀಗೆ ಮಾಡುತ್ತಿದ್ದಾರೆ. ಇದು ನಿಲ್ಲಬೇಕು,, ಇದಕ್ಕೆ ಒಂದು ಅಭಿಯಾನ ಮಾಡಬೇಕು, ಎಲ್ಲರೂ ಸಹಕರಿಸಿ