ADVERTISEMENT
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ. 2018ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ಚುನಾವಣೆಯಲ್ಲೇ ಗೆದ್ದು ಶಾಸಕರಾದವರು.
ಹರೀಶ್ ಪೂಂಜಾ ಅವರ ಕುಟುಂಬದ ಹೆಸರಲ್ಲಿ ಎಷ್ಟು ಆಸ್ತಿ ಇದೆ..? 2018ರಲ್ಲಿ ಚುನಾವಣಾ ಆಯೋಗಕ್ಕೆ ಕೊಟ್ಟಿರುವ ಮಾಹಿತಿಯಲ್ಲಿ ಪೂಂಜಾ ಅವರು ಎಷ್ಟು ಆಸ್ತಿ ಘೋಷಿಸಿಕೊಂಡಿದ್ದಾರೆ..?
ತಮ್ಮ ಮತ್ತು ಪತ್ನಿ ಸ್ವೀಕೃತ ಹೆಸರಲ್ಲಿರುವ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಶಾಸಕ ಹರೀಶ್ ಪೂಂಜಾ ಘೋಷಿಸಿಕೊಂಡಿದ್ದಾರೆ.
ಪೂಂಜಾ ದಂಪತಿ ವಾರ್ಷಿಕ ಆದಾಯ:
2016-17ನೇ ಸಾಲಿನ ಆದಾಯ ತೆರಿಗೆ ಸಲ್ಲಿಕೆ ಪ್ರಕಾರ ಹರೀಶ್ ಪೂಂಜಾ ಅವರ ವಾರ್ಷಿಕ ಆದಾಯ 15 ಲಕ್ಷದ 9 ಸಾವಿರ.
ಪೂಂಜಾ ಅವರ ಪತ್ನಿ ಸ್ವೀಕೃತ ಅವರ ವಾರ್ಷಿಕ ಆದಾಯ 7 ಲಕ್ಷದ 57 ಸಾವಿರ ರೂ.
ಠೇವಣಿ: ಹರೀಶ್ ಪೂಂಜಾ ಹೆಸರಲ್ಲಿ:
ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ : 10,669 ರೂ. + 3,569 ರೂ.
ವಿಜಯಾ ಬ್ಯಾಂಕ್: 90 ರೂ.
ವಿಶ್ವಕರ್ಮ ಸಹಕಾರ ಬ್ಯಾಂಕ್: 4,778 ರೂ.
ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ: 166 ರೂ.
ಸಿಂಡಿಕೇಟ್ ಬ್ಯಾಂಕ್ – 8 ಸಾವಿರ ರೂ.
ಠೇವಣಿ: ಪತ್ನಿ ಸ್ವೀಕೃತ ಹೆಸರಲ್ಲಿ:
ಕೆನರಾ ಬ್ಯಾಂಕ್: 2 ಲಕ್ಷದ 88 ಸಾವಿರ ರೂ.
ಎಸ್ಬಿಐ: 59 ಸಾವಿರ ರೂ.
ಶ್ರೀ ಭಗವತಿ ಕೋ ಆಪರೇಟಿವ್ ಬ್ಯಾಂಕ್ : 536 ರೂ.+ 36 ಸಾವಿರ ರೂ.
ವಿಶ್ವಕರ್ಮ ಸಹಕಾರ ಬ್ಯಾಂಕ್: 1,300 ರೂ.
ಕೆನರಾ ಬ್ಯಾಂಕ್: 1 ಲಕ್ಷದ 49 ಸಾವಿರ ರೂ. + 1 ಲಕ್ಷದ 28 ಸಾವಿರ ರೂ.
ಹೂಡಿಕೆ/ಬಂಡವಾಳ/ ಷೇರು:
ಫಿಕ್ಸೋಗ್ರಾಮರ್ ಪ್ರೀ ಪ್ರೈವೆಟ್ ಲಿಮಿಟೆಡ್: 4 ಲಕ್ಷ ರೂ.
ಸ್ವೀಕೃತ ಎಂಟರ್ಪ್ರೈಸಸ್: 35 ಲಕ್ಷದ 74 ಸಾವಿರ ರೂ. ಬಂಡವಾಳ
ಕ್ಯಾಂಪ್ಕೊ: 500 ರೂ.
ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಂಘ: 500 ರೂ.
ಸರಸ್ವತಿ ಪತ್ತಿನ ಸೌಹಾರ್ದ ಸಹಕಾರಿ ಸಂಘ: 500 ರೂ.
ವಿಶ್ವಕರ್ಮ ಸಹಕಾರ ಸಂಘ: 10 ಸಾವಿರ ರೂ.
ಪತ್ನಿ ಸ್ವೀಕೃತ ಹೆಸರಲ್ಲಿ: ವಿಶ್ವಕರ್ಮ ಸಹಕಾರ ಸಂಘ ಪಾಲು ಬಂಡವಾಳ 1 ಸಾವಿರ ರೂ.
ವಿಮೆ/ಎನ್ಎಸ್ಎಸ್/ವಿಮಾ ಪಾಲಿಸಿ: ಹರೀಶ್ ಪೂಂಜಾ ಅವರ ಹೆಸರಲ್ಲಿ:
ವಿಮಾ ಪಾಲಿಸಿ: 12 ಲಕ್ಷ ರೂಪಾಯಿ
ಭೀಮಾ ಚಿಟ್ಸ್, ಬಲ್ಮಠ: 3 ಲಕ್ಷದ 31 ಸಾವಿರ ರೂ.
ರಿಲಯನ್ಸ್ ಪಾಲಿಸಿ: 9 ಲಕ್ಷದ 39 ಸಾವಿರ
ಪೂಂಜಾ ಅವರ ಪತ್ನಿ ಹೆಸರಲ್ಲಿ:
ವಿಮೆ ಸೇರಿದಂತೆ ಪಾಲಿಸಿಗಳ ಮೊತ್ತ: 7 ಲಕ್ಷ ರೂಪಾಯಿ.
ಹರೀಶ್ ಪೂಂಜಾ ಅವರು ನೀಡಿರುವ ಸಾಲ/ಮುಂಗಡ: 89 ಲಕ್ಷದ 57 ಸಾವಿರ ರೂ.
ವಾಹನಗಳು:
ಇನ್ನೋವಾ ಕಾರು: 9 ಲಕ್ಷದ 74 ಸಾವಿರ ರೂ.
ಮಹೇಂದ್ರ ಬೊಲೆರೋ: 3 ಲಕ್ಷದ 66 ಸಾವಿರ ರೂ.
ಸ್ವಿಫ್ಟ್ ಕಾರು: 1 ಲಕ್ಷದ 70 ಸಾವಿರ ರೂ.
ಪತ್ನಿ ಸ್ವೀಕೃತ ಹೆಸರಲ್ಲಿ ಆಕ್ಟೀವ : 20 ಸಾವಿರ ರೂ.
ಆಭರಣ:
ಹರೀಶ್ ಪೂಂಜಾ ಅವರ ಹೆಸರಲ್ಲಿ: 74 ಸಾವಿರ ರೂ. ಮೌಲ್ಯ
ಪತ್ನಿ ಸ್ವೀಕೃತ ಹೆಸರಲ್ಲಿ: 16 ಲಕ್ಷದ 92 ಸಾವಿರ ರೂ. ಮೌಲ್ಯದ ಆಭರಣ
ಕೃಷಿ ಭೂಮಿ:
ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು 0.55 ಎಕರೆ – 2015ರಲ್ಲಿ 1 ಲಕ್ಷದ 19 ಸಾವಿರ ರೂಪಾಯಿಗೆ ಖರೀದಿ
ಕೃಷಿಯೇತರ ಭೂಮಿ:
ಬಂಟ್ವಾಳ ತಾಲೂಕಿನ ಪಜೀರು ಗ್ರಾಮ: 25,230 ಚದರ ಅಡಿ – 2012ರಲ್ಲಿ 20 ಲಕ್ಷದ 64 ಸಾವಿರ ರೂಪಾಯಿಗೆ ಖರೀದಿ.
ಮಂಗಳೂರು ತಾಲೂಕಿನ ಬಾಳ ಗ್ರಾಮ: 28,032 ಚದರ ಅಡಿ – ಪತ್ನಿ ಸ್ವೀಕೃತ ಅವರೊಂದಿಗೆ ಜಂಟಿ ಖರೀದಿ – 2016ರಲ್ಲಿ 51 ಲಕ್ಷ ರೂಪಾಯಿಗೆ ಖರೀದಿ
ಒಟ್ಟು ಚರಾಸ್ತಿ: (ಠೇವಣಿ, ನಗದು, ಉಳಿತಾಯ, ವಿಮೆ, ಸಾಲ ನೀಡಿದ್ದು, ಆಭರಣ ಒಳಗೊಂಡು)
ಹರೀಶ್ ಪೂಂಜಾ ಹೆಸರಲ್ಲಿ: 1 ಕೋಟಿ 70 ಲಕ್ಷದ 39 ಸಾವಿರ ರೂ.
ಪತ್ನಿ ಸ್ವೀಕೃತ ಹೆಸರಲ್ಲಿ: 36 ಲಕ್ಷದ 88 ಸಾವಿರ ರೂ.
ಒಟ್ಟು ಸ್ಥಿರಾಸ್ತಿ: ಕೃಷಿ ಮತ್ತು ಕೃಷಿಯೇತರ ಭೂಮಿ:
ಹರೀಶ್ ಪೂಂಜಾ ಹೆಸರಲ್ಲಿ – 91 ಲಕ್ಷದ 65 ಸಾವಿರ ರೂ. ಮೌಲ್ಯ.
ನಿಮ್ಮ ಹಕ್ಕು, ನಿಮ್ಮ ಅಧಿಕಾರ:
ಶಾಸಕರು ಮತ್ತು ಸಂಸದರ ಆಸ್ತಿ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬ ಮತದಾರರ ಸಂವಿಧಾನಿಕ ಹಕ್ಕು ಮತ್ತು ಅಧಿಕಾರ.
ಚುನಾವಣಾ ಪ್ರಕ್ರಿಯೆ ನಿಯಮ 1961:
ಚುನಾವಣಾ ಪ್ರಕ್ರಿಯೆ ನಿಯಮ 1961ರ ಅಡಿಯಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ತಾನು ಮತ್ತು ತನ್ನ ಪತಿ ಅಥವಾ ಪತ್ನಿ ಮತ್ತು ಅವಲಂಬಿತ ಮಕ್ಕಳ ಹೆಸರಲ್ಲಿರುವ ಸ್ಥಿರಾಸ್ತಿ ಮತ್ತು ಚರಾಸ್ತಿ ಮಾಹಿತಿಗಳನ್ನು ನಾಮಪತ್ರ ಸಲ್ಲಿಕೆಯ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸುವುದು ಕಡ್ಡಾಯ.
ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿರುವ ಠೇವಣಿ, ಆಭರಣ ಒಳಗೊಂಡಂತೆ ಎಲ್ಲ ರೀತಿಯ ಸ್ಥಿರಾಸ್ತಿ ಮತ್ತು ಚರಾಸ್ತಿಯ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನಮೂನೆ-26ರ ಮಾದರಿಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸುವುದು ಕಡ್ಡಾಯ.
ಅನರ್ಹಗೊಳಿಸಬಹುದು:
ಒಂದು ವೇಳೆ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಯೂ ಪತಿ ಅಥವಾ ಪತ್ನಿ ಮತ್ತು ಅವಲಂಬಿತ ಮಕ್ಕಳ ಹೆಸರಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿಯನ್ನು ಮುಚ್ಚಿಟ್ಟರೆ, ಆ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದ ಬಳಿಕ ನಡೆಬಹುದಾದ ತನಿಖೆಯಲ್ಲಿ ಆಸ್ತಿ ಮಾಹಿತಿ ಮುಚ್ಚಿಟ್ಟಿದ್ದು ಸಾಬೀತಾದರೆ ಗೆದ್ದ ಆ ಅಭ್ಯರ್ಥಿಯನ್ನು ಅನರ್ಹಗೊಳಿಸಬಹುದು ಎಂದು ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಲೋಕಾಯುಕ್ತಕ್ಕೂ ಮಾಹಿತಿ ಸಲ್ಲಿಕೆ ಕಡ್ಡಾಯ:
ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 22ರ ಪ್ರಕಾರ ಪ್ರತಿ ವರ್ಷ ಜೂನ್ 30ರೊಳಗೆ ಸಾರ್ವಜನಿಕ ಸೇವಕರು ಅಂದರೆ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು, ನಿಗಮ/ಮಂಡಳಿ/ಪ್ರಾಧಿಕಾರ, ಸಮಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಾವು ಮತ್ತು ತಮ್ಮ ಪತಿ ಅಥವಾ ಪತ್ನಿ ಮತ್ತು ಅವಲಂಬಿತರ ಹೆಸರಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿ ಸಲ್ಲಿಸುವುದು ಕಡ್ಡಾಯ.
ADVERTISEMENT