ಭಾರತೀಯ ಭೂಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್ ಪತನಗೊಂಡಿದೆ.
ಈಶಾನ್ಯ ರಾಜ್ಯ ಅರುಣಾಚಲಪ್ರದೇಶದ ಪೂರ್ವ ಕೆಮಂಗ್ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನವಾಗಿದೆ.
ಹೆಲಿಕಾಪ್ಟರ್ನಲ್ಲಿ ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ದರ್ಜೆ ಇಬ್ಬರು ಪೈಲಟ್ಗಳಿದ್ದರು. ಇಬ್ಬರೂ ಪೈಲಟ್ಗಳ ಪತ್ತೆಗಾಗಿ ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿದೆ.
ಪೂರ್ವ ಕೆಮಂಗ್ ಜಿಲ್ಲೆಯ ಸಂಗೆ ಗ್ರಾಮದಿಂದ ಅಸ್ಸಾಂ ರಾಜ್ಯದ ಸೊಂಟಿಪುರ್ಗೆ ಹೆಲಿಕಾಪ್ಟರ್ ಬೆಳಗ್ಗೆ 9 ಗಂಟೆಗೆ ಟೇಕಾಫ್ ಆಗಿತ್ತು.
ಆದರೆ ಟೇಕಾಫ್ ಆದ 15 ನಿಮಿಷದಲ್ಲೇ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿತು.
ದಿರಾಂಗ್ ಗ್ರಾಮದಲ್ಲಿ ಹೆಲಿಕಾಪ್ಟರ್ ಹೊತ್ತಿ ಊರಿಯುತ್ತಿದಿದ್ದನ್ನು ಗ್ರಾಮಸ್ಥರು ನೋಡಿದ್ದಾರೆ. ಮಧ್ಯಾಹ್ನ 12.30ರ ಬಗ್ಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ.
ಗ್ರಾಮದಲ್ಲಿ ಮೊಬೈಲ್ ಸಂಪರ್ಕ ಇಲ್ಲದೇ ಇರುವುದು ಮತ್ತು ದಟ್ಟ ಮಂಜಿನ ಕಾರಣ ಕಾರ್ಯಾಚರಣೆ ದುಸ್ತರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ADVERTISEMENT
ADVERTISEMENT