ಕೆಎಸ್ಆರ್ಟಿಸಿ ಬಸ್ಗಳಲ್ಲಿ ನೀಡಲಾಗುವ ಜಾಹೀರಾತು ತಂಬಾಕಿನದ್ದಲ್ಲ ಎಂದು ಕೆಎಸ್ಆರ್ಟಿಸಿ ಸ್ಪಷ್ಟಪಡಿಸಿದೆ.
ಮಂಗಳೂರಿನಿಂದ ಮುಡಿಪುವರೆಗೆ ತೆರಳುವ ಕೆಎಸ್ಆರ್ಟಿಸಿ ಬಸ್ನ ಹಿಂಭಾಗದಲ್ಲಿ ತಂಬಾಕು ಕಂಪನಿಯ ವಿಮಲ್ ಜಾಹೀರಾತನ್ನು ನೀಡಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಲಾಗಿತ್ತು.
ಜನ ದುಶ್ಚಟ ಬೆಳೆಸುವುದನ್ನು ಸರಕಾರ ಬೆಂಬಲಿಸುತ್ತದೆಯೇ..? ದುಡ್ಡು ಸಿಗುತ್ತದೆಂದು ಗುಟ್ಕಾ ಜಾಹೀರಾತನ್ನು ಸರಕಾರಿ ಬಸ್ಸುಗಳಲ್ಲಿ ಹಾಕುವುದು ಎಷ್ಟು ಸರಿ..? ಹಾಗಾದರೆ ಇದೇ ಬಸ್ಸೊಳಗೆ ಕೂತು ಗುಟ್ಕಾ, ತಂಬಾಕು ಸೇವನೆಗ್ಯಾಕೆ ನಿರ್ಬಂಧ..?
ಎಂದು ಇಸ್ಮತ್ ಪಜೀರ್ ಎನ್ನುವವರು ಪ್ರಶ್ನಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್ಆರ್ಟಿಸಿ
ಸರ್ಕಾರಿ ಬಸ್ಗಳ ಮೇಲೆ ಗುಟ್ಕಾ ಜಾಹೀರಾತು ನೀಡಿರುವ ಸಂಬಂಧ ದೂರನ್ನು ಪರಿಶೀಲಿಸಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಯಾವುದೇ ಗುಟ್ಕಾ ಅಥವಾ ತಂಬಾಕು ಜಾಹೀರಾತುಗಳನ್ನು ಪ್ರದರ್ಶಿಸಲು ಅವಕಾಶ ನೀಡಿರುವುದಿಲ್ಲ. ಸದರಿ ಜಾಹೀರಾತು ಏಲಕ್ಕಿ ಉತ್ಪನ್ನವಾಗಿದ್ದು, ಇದು ತಂಬಾಕು ರಹಿತ ಉತ್ಪನ್ನವಾಗಿರುತ್ತದೆ
ಎಂದು ಕೆಎಸ್ಆರ್ಟಿಸಿ ಸ್ಪಷ್ಟಪಡಿಸಿದೆ.
ಕಳೆದ ವರ್ಷ ಶಾರೂಖ್ ಖಾನ್, ಅಜಯ್ ದೇವಗನ್ ಅವರ ಜೊತೆಗೆ ಅಕ್ಷಯ್ ಕುಮಾರ್ ಅವರು ವಿಮಲ್-ಇಲಾಚಿ (ಏಲಕ್ಕಿ) ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು. ಆದರೆ ಸಾರ್ವಜನಿಕ ಟೀಕೆಗಳ ಬಳಿಕ ಆ ವಿಮಲ್ ಜಾಹೀರಾತಿನಿಂದ ಹಿಂದೆ ಸರಿದಿದ್ದರು.
ADVERTISEMENT
ADVERTISEMENT