ಇಂದಿನಿಂದ ದೇಶದಲ್ಲಿ ಆಭರಣ ಖರೀದಿ ಮತ್ತು ಮಾರಾಟಕ್ಕೆ ಹೊಸ ನಿಯಮ ಜಾರಿಯಾಗಿದೆ.
ಏಪ್ರಿಲ್ 1ರಿಂದ ದೇಶದಲ್ಲಿ 6 ಅಂಕಿಗಳಿರುವ ಹಾಲ್ಮಾರ್ಕ್ ಐಡಿ ಇರುವ ಚಿನ್ನವನ್ನು ಮಾರಾಟ ಮಾಡಲು ಅವಕಾಶ ಇದೆ.
ಅಂದರೆ ಇವತ್ತಿನಿಂದ 4 ಅಂಕಿಗಳ ಹಾಲ್ಮಾರ್ಕ್ ಐಡಿ ಇರುವ ಚಿನ್ನವನ್ನು ಮಾರಾಟ ಮಾಡುವಂತಿಲ್ಲ.
ADVERTISEMENT
ಪ್ರತಿಯೊಂದು ಆಭರಣಕ್ಕೂ ಪ್ರತ್ಯೇಕವಾದ 6 ಅಂಕಿಗಳ ಹೆಚ್ಯುಐಡಿ (Hallmark Unique Identification) ಸಂಖ್ಯೆಯನ್ನು ನೀಡಲಾಗುತ್ತದೆ.
ಈ ಹಾಲ್ಮಾರ್ಕ್ ಸಂಖ್ಯೆಯನ್ನು ಭಾರತೀಯ ಗುಣಮಟ್ಟ ದಳ (BIS)ನ App ಮೂಲಕವೋ ಪರಿಶೀಲನೆ ಮಾಡಬಹುದು.
ಹಾಲ್ಮಾರ್ಕ್:
ಹಾಲ್ಮಾರ್ಕ್ ಎಂದರೆ ಚಿನ್ನದ ಪರಿಶುದ್ಧತೆಯ ಮಾಪನ. ಚಿನ್ನ ಅತ್ಯಂತ ತೆಳುವಾದ ಲೋಹವಾಗಿದ್ದು, ಅವುಗಳಿಗೆ ಇತರೆ ಲೋಹಗಳನ್ನು ಮಿಶ್ರಣ ಮಾಡಿದರೆ ಆಗ ಅಂತಹ ಚಿನ್ನ ಪರಿಶುದ್ಧವಾಗಿರಲ್ಲ.
ಮಾಹಿತಿಗಳ ಪ್ರಕಾರ ಭಾರತದಲ್ಲಿ 10.56 ಕೋಟಿಯಷ್ಟು ಹಾಲ್ಮಾರ್ಕ್ ಆಗಿರುವ ಚಿನ್ನಾಭರಣ ಇದೆ.
ಆಭರಣದ ಮೇಲೆ 916 ಎನ್ನುವುದು ಆ ಚಿನ್ನಾಭರಣದಲ್ಲಿ ಬಂಗಾರದ ಪ್ರಮಾಣ ಶೇಕಡಾ 91.6ರಷ್ಟಿದೆ ಎಂಬ ಮಾಹಿತಿ.
6 ವಿಧದ ಚಿನ್ನ: ಭಾರತದಲ್ಲಿ 6 ವಿಧದ ಬಂಗಾರದ ಮಾರಾಟಕ್ಕೆ ಅನುಮತಿ ಇದೆ. 14 ಕ್ಯಾರೆಟ್, 18 ಕ್ಯಾರೆಟ್, 22 ಕ್ಯಾರೆಟ್, 23 ಕ್ಯಾರೆಟ್ ಮತ್ತು 24 ಕ್ಯಾರೆಟ್.
24 ಕ್ಯಾರೆಟ್ ಚಿನ್ನ ಅಪ್ಪಟ ಚಿನ್ನ. ಈ ಆಭರಣದಲ್ಲಿ ಶೇಕಡಾ 99.99ರಷ್ಟು ಚಿನ್ನವನ್ನು ಬಳಸಲಾಗಿರುತ್ತದೆ.
22 ಕ್ಯಾರೆಟ್ ಆಭರಣ 916 ಹಾಲ್ಮಾರ್ಕ್ ಹೊಂದಿರುವ ಚಿನ್ನವಾಗಿದ್ದು ಶೇಕಡಾ 91.6ರಷ್ಟು ಚಿನ್ನವನ್ನು ಹೊಂದಿರುತ್ತದೆ.
18 ಕ್ಯಾರೆಟ್ ಆಭರಣದಲ್ಲಿ ಶೇಕಡಾ 75ರಷ್ಟು ಚಿನ್ನ, ಉಳಿದ ಶೇಕಡಾ 25ರಷ್ಟು ಸತು, ತಾಮ್ರವನ್ನು ಮಿಶ್ರಣ ಮಾಡಲಾಗಿರುತ್ತದೆ. 14 ಕ್ಯಾರೆಟ್ ಆಭರಣದಲ್ಲಿ ಚಿನ್ನದ ಪ್ರಮಾಣ ಶೇಕಡಾ 14.7ರಷ್ಟಿರುತ್ತದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 9 ಮತ್ತು 10 ಕ್ಯಾರೆಟ್ ಚಿನ್ನ ಮಾರಾಟಕ್ಕೆ ಅನುಮತಿ ಇದೆಯಾದರೂ ಭಾರತದಲ್ಲಿ ಅನುಮತಿ ಇಲ್ಲ.
ADVERTISEMENT