ಮತದಾನಕ್ಕೆ ಇನ್ನು 10 ದಿನವಷ್ಟೇ ಉಳಿದಿದೆ.. ಈ ಹಂತದಲ್ಲಿ ಹತ್ತಾರು ಸಂಸ್ಥೆಗಳು, ವಾಹಿನಿಗಳು ಚುನಾವಣಾಪೂರ್ವ ಸಮೀಕ್ಷೆಯನ್ನು ಪ್ರಕಟಿಸುತ್ತಿವೆ. ಬಹುತೇಕ ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ.. ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತಿವೆ.
ಸಿ-ಡೈಲಿ ಟ್ರ್ಯಾಕರ್
ಸಿ-ಡೈಲಿ ಟ್ರ್ಯಾಕರ್ ಎನ್ನುವ ಸಂಸ್ಥೆ ಪ್ರಕಟಿಸಿದ ಚುನಾವಣಾ ಪೂರ್ವ ಸಮೀಕ್ಷೆ ಹೀಗಿದೆ.
ಸಿ-ಡೈಲಿ ಟ್ರ್ಯಾಕರ್
– ಬಿಜೆಪಿ – 46
– ಕಾಂಗ್ರೆಸ್ – 147
– ಜೆಡಿಎಸ್ – 26
– ಇತರರು – 03
ಸಿ-ಡೈಲಿ ಟ್ರ್ಯಾಕರ್ ಪ್ರಕಾರ ಬಿಜೆಪಿ ಸರ್ಕಾರ ಹೀನಾಯ ಸೋಲು ಕಾಣಲಿದೆ. ಆಡಳಿತಾರೂಢ ಪಕ್ಷಕ್ಕೆ ಕೇವಲ 46 ಸ್ಥಾನ ಸಿಗಲಿದೆ ಎಂದು ಹೇಳಿದೆ. ಮತಗಳಿಕೆ ಪ್ರಮಾಣ 30.06 ಪರ್ಸೆಂಟ್ ಗೆ ಕುಸಿಯಲಿದೆ.
ಕಾಂಗ್ರೆಸ್ ಪಕ್ಷ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನ ಗೆದ್ದು ಅಧಿಕಾರಕ್ಕೆ ಏರಲಿದೆ. ಶೇಕಡಾ 44.4ರಷ್ಟು ಮಂದಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ.
ಜೆಡಿಎಸ್ 26 ಸ್ಥಾನಗಳಿಗೆ ಕುಸಿಯಲಿದೆ.ಮತ ಗಳಿಕೆ ಪ್ರಮಾಣ ಶೇಕಡಾ 18ಕ್ಕೆ ಕುಸಿಯಲಿದೆ
ಸಿ-ಡೈಲಿ ಟ್ರ್ಯಾಕರ್ ನಡೆಸಿದ ಸಮೀಕ್ಷೆಯಲ್ಲಿ..
ಮುಸ್ಲಿಂ ಮೀಸಲಾತಿ ತೆಗೆದ ಬಿಜೆಪಿ ಸರ್ಕಾರದ ನಿರ್ಧಾರ ತಪ್ಪು ಎಂದು ಶೇಕಡಾ 86ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಕೇವಲ 14ರಷ್ಟು ಮಂದಿ ಮಾತ್ರ ಬಿಜೆಪಿ ಸರ್ಕಾರದ ನಿರ್ಧಾರ ಸರಿ ಇದೆ ಎಂದಿದ್ದಾರೆ.
ಮುಖ್ಯಮಂತ್ರಿಗಳ ಕಾರ್ಯವೈಖರಿ ಹೇಗಿದೆ ಎಂಬ ಪ್ರಶ್ನೆಗೆ ಶೇಕಡಾ 84ರಷ್ಟು ಮಂದಿ ಕೆಟ್ಟದಾಗಿದೆ ಎಂದರೇ, ಶೇಕಡಾ 16ರಷ್ಟು ಮಂದಿ ಮಾತ್ರ ಸರಿಯಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ಯಾರು ಅತ್ಯುತ್ತಮ ಎಂಬ ಪ್ರಶ್ನೆಗೆ
ಸಿದ್ದರಾಮಯ್ಯ ಬೆಸ್ಟ್ ಎಂದು ಶೇಕಡಾ 44ರಷ್ಟು ಮಂದಿ ಹೇಳಿದ್ದಾರೆ. ಬೊಮ್ಮಾಯಿ ಪರ ಶೇಕಡಾ 21ರಷ್ಟು ಮಂದಿ, ಡಿಕೆ ಶಿವಕುಮಾರ್ ಅತ್ಯುತ್ತಮ ಎಂದು ಶೇಕಡಾ 13ರಷ್ಟು ಮಂದಿ. ಕುಮಾರಸ್ವಾಮಿ ಪರ ಶೇಕಡಾ 11ರಷ್ಟು ಮಂದಿ, ಇತರೆ ಯಾರಾದರೂ ಆಗಲಿ ಎಂದು ಶೇಕಡಾ 11ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.