No Result
View All Result
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಂದು ಪ್ರತಿಷ್ಠಿತ ಕ್ಷೇತ್ರ ಚಾಮರಾಜನಗರ. ವಸತಿ ಸಚಿವ ವಿ ಸೋಮಣ್ಣ ಅವರನ್ನು ಬಿಜೆಪಿ ಎರಡು ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಒಂದು ವರುಣಾ ಮತ್ತೊಂದು ಚಾಮರಾಜನಗರ. ವರುಣಾದಲ್ಲಿ ಸಿದ್ದರಾಮಯ್ಯಗೆ ಎದುರಾಳಿಯಾದ್ರೆ ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಆಪ್ತ ಶಾಸಕ ಪುಟ್ಟರಂಗ ಶೆಟ್ಟಿ ಅವರಿಗೆ ಸೋಮಣ್ಣ ಎದುರಾಳಿ.
ಜಾತಿ ಲೆಕ್ಕಾಚಾರ:
ಲಿಂಗಾಯತರು- 50 ಸಾವಿರ. ಉಪ್ಪಾರರು – 30 ಸಾವಿರ, ಎಸ್ಟಿ – 20 ಸಾವಿರ, ಮುಸಲ್ಮಾನರು – 20 ಸಾವಿರ, ಕುರುಬರು – 8 ಸಾವಿರ, ಎಸ್ಸಿ – 50 ಸಾವಿರ
ಯಾರು ಗೆಲ್ಲಬಹುದು..?
ಚುನಾವಣೋತ್ತರ ಸಮೀಕ್ಷೆ ಪ್ರಕಾರ ಚಾಮರಾಜನಗರದಲ್ಲಿ ಸೋಮಣ್ಣ ಸೋಲಲಿದ್ದಾರೆ. ಶಾಸಕ ಪುಟ್ಟರಂಗಶೆಟ್ಟಿ ಅವರು ಮತ್ತೆ ಗೆದ್ದು ಶಾಸಕರಾಗಲಿದ್ದಾರೆ. ಈ ಮೂಲಕ ವರುಣ ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣ ಸೋಲಲಿದ್ದಾರೆ.
ಕಾರಣಗಳು:
1. ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆ
2. ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳು
3. ಚಾಮರಾಜನಗರಕ್ಕೆ ಸಚಿವ ಸೋಮಣ್ಣ ಹೊರಗಿನವರು ಎಂಬ ಅಭಿಪ್ರಾಯ
5. ಉಸ್ತುವಾರಿ ಸಚಿವರಾಗಿ ಸೋಮಣ್ಣ ಅವರಿಂದ ಚಾಮರಾಜನಗರ ಜಿಲ್ಲೆಯಲ್ಲಿ ನಿರೀಕ್ಷಿತ ಕೆಲಸ ಆಗಲಿಲ್ಲ ಎಂಬ ಅಸಮಾಧಾನ
6. ಲಿಂಗಾಯತ ಸಮುದಾಯದ ಮತಗಳು ಶಾಸಕ ಪುಟ್ಟರಂಗಶೆಟ್ಟಿ ಅವರ ಪರವಾಗಿ ಕ್ರೋಢೀಕರಣವಾಗಿದ್ದು ಸೋಮಣ್ಣ ಅವರಿಗೆ ಹಿನ್ನಡೆ
6. ಪುಟ್ಟರಂಗ ಶೆಟ್ಟಿ ಅವರು ಕರ್ನಾಟಕದಲ್ಲಿರುವ ಏಕೈಕ ಉಪ್ಪಾರ ಸಮುದಾಯದ ಶಾಸಕ. ಹೀಗಾಗಿ ಅವರ ಬೆನ್ನಿಗೆ ಉಪ್ಪಾರ ಸಮುದಾಯ ನಿಂತಿದೆ
7. ಸಿದ್ದರಾಮಯ್ಯ ಅವರ ನೇತೃತ್ವದ ಕಾರಣದಿಂದ ಕಾಂಗ್ರೆಸ್ ಪರವಾಗಿ ಅಹಿಂದ ಮತಗಳ ಕ್ರೋಢೀಕರಣ.
No Result
View All Result
error: Content is protected !!