ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೇರಲಿದೆ ಎಂದು 10ರಲ್ಲಿ ಎಂಟು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿದೆ.
ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಟ್ವಿಟ್ಟರ್ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅಂಕಿ ಸಂಖ್ಯೆಗಳು ನಿಮ್ಮ ಊಹೆಯಷ್ಟೇ ಎಂದಿದ್ದಾರೆ. ಇದಕ್ಕೆ ಸಮರ್ಥನೆಯನ್ನು ಕೂಡ ನೀಡಿದ್ದಾರೆ.
ಎಲ್ಲಾ ಸಮೀಕ್ಷೆದಾರರಿಗೆ ಗೌರವದಿಂದ ಹೇಳಬಯಸುತ್ತೇನೆ. ಬಿಜೆಪಿಗೆ 2014ರಲ್ಲಿ 282 ಸ್ಥಾನ, 2019ರಲ್ಲಿ 303 ಸ್ಥಾನ, 2022ರಲ್ಲಿ 156 ಸ್ಥಾನ ಅಥವಾ 2018ರಲ್ಲಿ 104 ಸ್ಥಾನಗಳು ದೊರೆಯಬಹುದು ಎಂದು ಯಾರು ಕೂಡ ಸಮೀಕ್ಷೆಯಲ್ಲಿ ತಿಳಿಸಿರಲಿಲ್ಲ.
2018ರಲ್ಲಿ 14 ವಿಧಾನಸಭೆ ಕ್ಷೇತ್ರಗಳಲ್ಲಿ ಶೂನ್ಯ ಮುನ್ನಡೆ ಹೊಂದಿದ್ದರೂ, 24000 ಬೂತ್ ಗಳಲ್ಲಿ ನಾವು ಲೀಡ್ ಪಡೆದಿದ್ದೆವು. ಈ ಬಾರಿ ಎಲ್ಲಾ ವಿಧಾನಸಭೆಯ ಎಲ್ಲಾ ಕ್ಷೇತ್ರಗಳು ನಮ್ಮ ಪರವಾಗಿ ಇರಲಿದೆ. 31000 ಬೂತ್ ಗಳಲ್ಲಿ ನಾವೇ ಲೀಡ್ ಪಡೆಯಲಿದ್ದೇವೆ. ಉಳಿದ ಅಂಕಿಸಂಖ್ಯೆಗಳು ನಿಮ್ಮ ಊಹೆಯಷ್ಟೇ….
ಎಂದು ಬಿಎಲ್ ಸಂತೋಷ್ ಟ್ವೀಟ್ ಮಾಡಿದ್ದಾರೆ.