ಹೊಸ ಶಾಸಕರ ಪ್ರಮಾಣವಚನದೊಂದಿಗೆ ಕರ್ನಾಟಕದಲ್ಲಿ 16ನೇ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದೆ. ಹಾಗಾದರೆ ಶಾಸಕರ ಸಂಬಳ ಎಷ್ಟಿರುತ್ತೆ ಎಂಬ ಮಾಹಿತಿ ಇಲ್ಲಿದೆ.
ಕಳೆದ ವರ್ಷದ ಕೋವಿಡ್ ಅಬ್ಬರ ತಣ್ಣಗಾದ ಬಳಿಕ ಆಡಳಿತ ಪಕ್ಷ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ವಸಮ್ಮತದಿಂದ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ವೇತನ ಮತ್ತು ಭತ್ಯೆ ಹೆಚ್ಚಳದ ನಿರ್ಧಾರ ಕೈಗೊಂಡವು.
ಶಾಸಕರ ವೇತನ ಎಷ್ಟಿದೆ..?
ಶಾಸಕರ ವೇತನ: ತಿಂಗಳಿಗೆ 40 ಸಾವಿರ ರೂಪಾಯಿ
ಪ್ರಯಾಣ ಭತ್ಯೆ: ಪ್ರತಿ ಕಿಲೋ ಮೀಟರ್ಗೆ 35 ರೂಪಾಯಿ
ಕ್ಷೇತ್ರ ಪ್ರಯಾಣ ಭತ್ಯೆ: ಪ್ರತಿ ತಿಂಗಳಿಗೆ 60 ಸಾವಿರ ರೂಪಾಯಿ
ಪಿಂಚಣಿ: ಪ್ರತಿ ತಿಂಗಳಿಗೆ 50 ಸಾವಿರ ರೂಪಾಯಿ
ಶಾಸಕರ ದಿನಭತ್ಯೆ: 2,500 ರೂಪಾಯಿ
ಈ ಮೂಲಕ ಪ್ರತಿ ಶಾಸಕ ಮತ್ತು ವಿಧಾನಪರಿಷತ್ ಸದಸ್ಯನಿಗೆ ವೇತನ ಮತ್ತು ಭತ್ಯೆ ರೂಪದಲ್ಲಿ ತಿಂಗಳಿಗೆ 2 ಲಕ್ಷದ 5 ಸಾವಿರ ರೂಪಾಯಿ ಪಾವತಿ ಆಗುತ್ತದೆ.
ಅತೀ ಹೆಚ್ಚು ಸಂಬಳ ಯಾವ ರಾಜ್ಯದಲ್ಲಿ..?
ತೆಲಂಗಾಣದಲ್ಲಿ ಪ್ರತಿ ಶಾಸಕನಿಗೆ ಪ್ರತಿ ತಿಂಗಳು ಸಿಗುವ ವೇತನ (ಭತ್ಯೆ ಸೇರಿ): 2 ಲಕ್ಷದ 50 ಸಾವಿರ ರೂಪಾಯಿ.
ಮಧ್ಯಪ್ರದೇಶ: 2 ಲಕ್ಷದ 10 ಸಾವಿರ ರೂಪಾಯಿ
ದೆಹಲಿ: 2 ಲಕ್ಷದ 10 ಸಾವಿರ ರೂಪಾಯಿ
ಕರ್ನಾಟಕ: 2 ಲಕ್ಷದ 5 ಸಾವಿರ ರೂಪಾಯಿ
ಅತೀ ಕಡಿಮೆ ಸಂಬಳ ಪಡೆಯುವ ಶಾಸಕರು:
ಅರುಣಾಚಲ ಪ್ರದೇಶ: ಪ್ರತಿ ತಿಂಗಳಿಗೆ 25 ಸಾವಿರ ರೂಪಾಯಿ
ತ್ರಿಪುರ: 25 ಸಾವಿರದ 800 ರೂಪಾಯಿ
ಮೇಘಾಲಯ: 27 ಸಾವಿರದ 750 ರೂಪಾಯಿ
ನಾಗಲ್ಯಾಂಡ್, ಒಡಿಶಾ, ಉತ್ತರಾಖಂಡ್: 35 ಸಾವಿರ ರೂಪಾಯಿ
ಕೇರಳ: 43 ಸಾವಿರದ 750 ರೂಪಾಯಿ
ADVERTISEMENT
ADVERTISEMENT