ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಪರಿಣಾಮ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾವು ವಾಸವಿದ್ದ ಸರ್ಕಾರಿ ಬಂಗಲೆ ಕಾವೇರಿ ನಿವಾಸವನ್ನು ತೊರೆದಿದ್ದಾರೆ.
2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾವೇರಿ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಸ್ತವ್ಯವಿದ್ದರು.
ಇದೀಗ ಬಿಜೆಪಿ ಚುನಾವಣೆಯಲ್ಲಿ ಪರಾಜಯಗೊಂಡಿರುವ ಕಾರಣ ಕಾವೇರಿ ನಿವಾಸವನ್ನು ಯಡಿಯೂರಪ್ಪ ಖಾಲಿ ಮಾಡಿದ್ದಾರೆ. ತಮ್ಮ ವಾಸ್ತವ್ಯವನ್ನು ಡಾಲರ್ಸ್ ಕಾಲನಿಯಲ್ಲಿರುವ ಧವಳಗರಿ ಬಂಗಲೆಗೆ ಬದಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿಗೆ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದ ಯಡಿಯೂರಪ್ಪ ಅವರು ಈ ಬಾರಿಯ ಚುನಾವಣೆಗೆ ಸ್ಪರ್ಧೆ ಮಾಡಿರಲಿಲ್ಲ. ಸ್ವಕ್ಷೇತ್ರ ಶಿಕಾರಿಪುರದಲ್ಲಿ ತಮ್ಮ ಬದಲಿಗೆ ಪುತ್ರ ವಿಜಯೇಂದ್ರರನ್ನು ಕಣಕ್ಕೆ ಇಳಿಸಿದ್ದರು.
ADVERTISEMENT
ADVERTISEMENT