ಐಪಿಎಲ್-2023ರ ಸೀಜನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸೆಣೆಸಲು ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ರೆಡಿ ಆಗಿವೆ. ಈಗಾಗಲೇ ಗುಜರಾತ್ ಪ್ಲೇಆಫ್ ತಲುಪಿದೆ. ಹೀಗಾಗಿ ಬೆಂಗಳೂರು ರಾಯಲ್ ಚಾಲೆಂಜರ್ಸ್ಗೆ ಈ ಮ್ಯಾಚ್ ತುಂಬಾನೆ ಇಂಪಾರ್ಟೆಂಟ್. ಈ ಪಂದ್ಯ ಗೆದ್ದಲ್ಲಿ ಮಾತ್ರ ಆರ್ಸಿಬಿ ಪ್ಲೇಆಫ್ ತಲುಪುವ ಅವಕಾಶಗಳಿವೆ. ಆದರೆ, ಈ ಅವಕಾಶಗಳಿಗೆ ಮಳೆರಾಯ ನೀರು ಚೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ.
ಬೆಂಗಳೂರಿನಲ್ಲಿ ರಣ ಮಳೆ ಆಗುತ್ತಿದ್ದು, ಬೆಂಗಳೂರಿನಲ್ಲಿ ನಿಗದಿಯಾದ ಕೊನೆಯ ಲೀಗ್ ಪಂದ್ಯ ನಡೆಯುವುದೇ ಅನುಮಾನವಾಗಿದೆ.
ಬೆಂಗಳೂರು ಪ್ಲೇ ಆಫ್ ಲೆಕ್ಕಾಚಾರ
– ಪಂದ್ಯ ನಡೆದಲ್ಲಿ ಗುಜರಾತ್ ವಿರುದ್ಧ ಗೆಲುವು ಸಾಧಿಸಬೇಕು. ಆಗ 16 ಪಾಯಿಂಟ್ ಮೂಲಕ, ಉನ್ನತ ರನ್ರೇಟ್ ಕಾರಣ ಆರ್ಸಿಬಿ ಪ್ಲೇ ಆಫ್ ತಲುಪುತ್ತದೆ.
– ಮಳೆ ಬಂದು ಪಂದ್ಯ ನಿಂತರೇ, ಗುಜರಾತ್-ಆರ್ಸಿಬಿಗೆ ತಲಾ ಒಂದು ಪಾಯಿಂಟ್ ಲಭಿಸುತ್ತದೆ. ಬೆಂಗಳೂರು ಖಾತೆಯಲ್ಲಿ ಒಂದು ಪಾಯಿಂಟ್ ಸೇರಲಿದ್ದು, 15 ಪಾಯಿಂಟ್ಸ್ಗೆ ತಲುಪುತ್ತದೆ.
– ಸದ್ಯ ಹೈದೆರಾಬಾದ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ(14 ಪಾಯಿಂಟ್) ಸೋತಲ್ಲಿ ,ಮಾತ್ರ ಆರ್ಸಿಬಿಗೆ ಪ್ಲೇ ಆಫ್ ತಲುಪುತ್ತದೆ.. ಮುಂಬೈ ಗೆದ್ದಲ್ಲಿ ಆರ್ಸಿಬಿ ಮನೆಗೆ ಹಿಂತಿರುಬೇಕಾಗುತ್ತದೆ.
ADVERTISEMENT
ADVERTISEMENT