ADVERTISEMENT
ಬೆಂಗಳೂರಲ್ಲಿ ಮಧ್ಯಾಹ್ನ 3 ಗಂಟೆಯಿಂದ ಧಾರಾಕಾರ ಮಳೆ ಆಗಿದೆ. ರಣ ಮಳೆಗೆ ರಾಜಧಾನಿಯ ಕೆ ಆರ್ ಸರ್ಕಲ್ ಅಂಡರ್ಪಾಸ್ನಲ್ಲಿ ಕಾರು ಸಿಲುಕಿಕೊಂಡು ಕಾರಲ್ಲಿ ಪ್ರಯಾಣಿಸ್ತಿದ್ದ ಇನ್ಫೋಸಿಸ್ನ ಉದ್ಯೋಗಿ ಭಾನುರೇಖಾ ಅವರು ಮೃತಪಟ್ಟಿದ್ದಾರೆ.
ರಾಜಧಾನಿ ಬೆಂಗಳೂರಲ್ಲಿ ಎಲ್ಲೆಲ್ಲಿ ಮಳೆ ಹಾನಿ ಆಗಿದೆ ಎಂಬ ವಿವರ ಇಲ್ಲಿದೆ:
1. ಕಬ್ಬನ್ ರಸ್ತೆಯಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಲಾಗಿದೆ.
2. ಬಳ್ಳಾರಿ ರಸ್ತೆಯಲ್ಲಿ ಮರ ಬಿದ್ದು ವಾಹನಗಳಿಗೆ ಹಾನಿ ಆಗಿದೆ.
3. ಎಂ ಜಿ ರಸ್ತೆಯ ಕ್ವೀನ್ಸ್ ಜಂಕ್ಷನ್ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
4. ಬಸವ ಮಂಟಪ, ಭಾಷ್ಯಂ ಸರ್ಕಲ್ ಮಧ್ಯ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದ ಮರವನ್ನು ಪೊಲೀಸರು ತೆರವುಗೊಳಿಸಿದ್ದಾರೆ.
5. ಬಸವನಗುಡಿಯ ಬಿ ಪಿ ವಾಡಿಯ ರಸ್ತೆಯಲ್ಲಿ ಮರ ಬಿದ್ದಿದೆ.
6. ಮಂತ್ರಿ ಮಾಲ್, ಕಲ್ಪನ ಜಂಕ್ಷನ್, ಶಿವಾನಂದ, ಹಳೆ ಉದಯ ಟಿವಿ ಜಂಕ್ಷನ್ನಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ.
7. ಕುಮಾರಕೃಪ ರಸ್ತೆಯ ಚಿತ್ರಕಲಾ ಪರಿಷತ್ ಗೇಟ್ ಬಳಿ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ.
8. ರಾಜಾಜಿನಗರದ 50ನೇ ಕ್ರಾಸ್ನಲ್ಲಿ ದೊಡ್ಡ ಮರ ಬಿದ್ದ ಕಾರಣ ಹಲವು ವಾಹನಗಳಿಗೆ ಹಾನಿಯಾಗಿದೆ.
9. ಹೆಬ್ಬಾಳ ವೃತ್ತ, ಹೆಬ್ಬಾಳ ಫ್ಲೈಓವರ್ ಕೆಳಗೆ, ಕೋಲ್ ಜಂಕ್ಷನ್, ದೇವಿನಗರ ಕ್ರಾಸ್ನಲ್ಲಿ ರಸ್ತೆ ನೀರು ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ.
10. ಜಾಲಹಳ್ಳಿ ಬಳಿಯ ಸಾಹಿತ್ಯಕೂಟದಿಂದ ಬಿ.ಇ.ಎಲ್ ಕಡೆಗೆ ಸಂಚರಿಸುವ ರಸ್ತೆಯಲ್ಲಿ ಮರ ಬಿದ್ದಿದೆ.
11. ಭಾರತಿ ನರ್ಸಿಂಗ್ ಹೋಂ ರಸ್ತೆಯಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದಿದೆ.
12. ಜಯಮಹಲ್ ರಸ್ತೆಯಲ್ಲಿ ದೊಡ್ಡ ಮರ ಬಿದ್ದಿದೆ.
13. ಮಹಾಲಕ್ಷ್ಮೀ ಲೇಔಟ್ನಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ADVERTISEMENT