ಮೇ 28ರಂದು ನಿಗದಿಯಾಗಿರುವ ಹೊಸ ಸಂಸತ್ ಭವನದ ಉದ್ಘಾಟನೆಯನ್ನು 19 ವಿರೋಧ ಪಕ್ಷಗಳು ಬಹಿಷ್ಕರಿಸಿವೆ.
ಇದೇ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ. ಆದರೆ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿಲ್ಲ.
ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡಬೇಕಿತ್ತು, ಪ್ರಧಾನಮಂತ್ರಿಗಳಲ್ಲ. ರಾಷ್ಟ್ರಪತಿಗಳಿಗೆ ಉದ್ಘಾಟನೆಗೆ ಅವಕಾಶ ನೀಡದೇ ಇರುವುದು ರಾಷ್ಟ್ರಪತಿ ಹುದ್ದೆಗೆ ಮಾಡಿದ ಅವಮಾನ ಮತ್ತು ಸಂವಿಧಾನದ ಉಲ್ಲಂಘನೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಸಂವಿಧಾನದ 71ನೇ ವಿಧಿ ಪ್ರಕಾರ ರಾಷ್ಟ್ರಪತಿಗಳು ಭಾರತದ ಮುಖ್ಯಸ್ಥರು ಮಾತ್ರವಲ್ಲದೇ ಸಂಸತ್ತಿನ ಅವಿಭಾಜ್ಯ ಅಂಗ. ಸಂಸತ್ತಿನ ಅಧಿವೇಶವನ್ನು ಕರೆಯುವುದು, ವರ್ಷದಲ್ಲಿ ಸಂಸತ್ತಿನ ಮೊದಲ ಅಧಿವೇಶನದ ಮೊದಲ ದಿನ ಉದ್ದೇಶಿಸಿ ಮಾತಾಡುವುದು ಕೂಡಾ ರಾಷ್ಟ್ರಪತಿಗಳೇ. ಸಂಸತ್ತಿನಲ್ಲಿ ಅಂಗೀಕಾರಗೊಂಡ ಮಸೂದೆಗಳು ಕಾಯ್ದೆಗಳಾಗಿ ಜಾರಿ ಆಗಲು ಸಹಿ ಹಾಕುವುದು ಕೂಡಾ ರಾಷ್ಟ್ರಪತಿಗಳೇ. ರಾಷ್ಟ್ರಪತಿಗಳಿಲ್ಲದೇ ಸಂಸತ್ತು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಹೀಗಿದ್ದಾಗ್ಯೂ ರಾಷ್ಟ್ರಪತಿಗಳಿಲ್ಲದೇ ಪ್ರಧಾನಮಂತ್ರಿಯವರೇ ಉದ್ಘಾಟನೆಗೆ ನಿರ್ಧರಿಸಿರುವುದು ರಾಷ್ಟ್ರಪತಿಗೆ ಮಾಡಲಾದ ಅವಮಾನ