ಆ ವಂಶದಲ್ಲಿ 95 ವರ್ಷಗಳ ನಂತರ ಹೆಣ್ಣು ಮಗು ಜನಿಸಿದೆ. ಈ ಸಂಭ್ರಮದಲ್ಲಿ ತಮ್ಮ ಮಗಳನ್ನು ಆನೆ ಮೇಲೆ ಮೆರವಣಿಗೆ ಮಾಡಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪಚ್ಗಾಂವ್ನಲ್ಲಿ ನೆಲೆಸಿರುವ ಗಿರೀಶ್ ಪಾಟೀಲ್ಗೆ ಐದು ತಿಂಗಳ ಹಿಂದೆ ಹೆಣ್ಮಗು ಜನಿಸಿದೆ.
ಮುದ್ದು ಮಗಳಿಗೆ ಮುದ್ದು ಮುದ್ದಾದ ಐರಾ ಎಂಬ ಹೆಸರನ್ನು ಇಟ್ಟಿದ್ದಾರೆ. ಮೊದಲ ಬಾರಿ ಐರಾಳನ್ನು ತಮ್ಮ ಮನೆಗೆ ಗಿರೀಶ್ ಪಾಟೀಲ್ ಶನಿವಾರ ಕರೆತಂದಿದ್ದಾರೆ.
ಈ ಕ್ಷಣ ಎಂದೆಂದಿಗೂ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಐರಾಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ. ಆನೆಯ ಮೇಲೆ ಮಗಳನ್ನು ಕೂರಿಸಿಕೊಂಡು ಊರೆಲ್ಲಾ ಮೆರವಣಿಗೆ ಹೋಗಿದ್ದಾರೆ.
ತುಂಬಾ ವರ್ಷಗಳ ನಂತರ ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದೆ ಎಂಬ ಸಂಭ್ರಮದಲ್ಲಿ ಇಡೀ ಕುಟುಂಬವಿದೆ.
ADVERTISEMENT
ADVERTISEMENT