Sunday, September 8, 2024
ADVERTISEMENT

ಭವಿಷ್ಯಕ್ಕೆ ಗ್ಯಾರಂಟಿ: ಮನೆಯಲ್ಲಿರೋ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು 1500 ರೂ.!

ADVERTISEMENT
ADVERTISEMENT

ಗ್ಯಾರಂಟಿ ಭರವಸೆಗಳ ನೆರಳು ನೆರೆಯ ರಾಜ್ಯಗಳಿಗೂ ವ್ಯಾಪಿಸಿದೆ. ಆಂಧ್ರ ಪ್ರದೇಶದಲ್ಲಿ ತೆಲುಗುದೇಶಂ ಪಕ್ಷ ಭವಿಷ್ಯಕ್ಕೆ ಗ್ಯಾರಂಟಿ ಹೆಸರಲ್ಲಿ ಮೊದಲ ಹಂತದ ಚುನಾವಣಾ ಪ್ರಣಾಳಿಕೆ ಪ್ರಕಟಿಸಿದೆ. ಭರವಸೆಗಳ ಮಹಾಪೂರವನ್ನೇ ಹರಿಸಿದೆ.

ಎಲ್ಲಾ ಮಹಿಳೆಯರಿಗೂ ಪ್ರತಿ ತಿಂಗಳೂ 1500 ರೂ.

18 ವರ್ಷದಿಂದ 59 ವರ್ಷದವರೆಗಿನ ಎಲ್ಲಾ ಮಳೆಯರ ಖಾತೆಗಳಿಗೆ ಪ್ರತಿ ತಿಂಗಳು 1500 ರೂ. ಜಮೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಣೆ ಮಾಡಿದ್ದಾರೆ. ಇದು ಮನೆಯಲ್ಲಿರುವ ಎಲ್ಲಾ ಮಹಿಳೆಯರಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.

ಮಕ್ಕಳ ಶಿಕ್ಷಣಕ್ಕೆ ಪ್ರತಿವರ್ಷ 15,000 ರೂ.

ತಾಯಿಗೆ ವಂದನೆ ಹೆಸರಲ್ಲಿ ಪ್ರತಿ ಮಗುವಿನ ಶಿಕ್ಷಣಕ್ಕೆ ಪ್ರತಿ ವರ್ಷ ೧೫ ಸಾವಿರ ಕೊಡುತ್ತೇವೆ. ಮನೆಯಲ್ಲಿ ಎಷ್ಟೇ ಮಕ್ಕಳು ಇರಲಿ ಅವರಿಗೆಲ್ಲಾ ಈ ಯೋಜನೆ ಅನ್ವಯವಾಗುತ್ತದೆ ಎಂದು ಚಂದ್ರಬಾಬು ನಾಯ್ಡು ಪ್ರಕಟಿಸಿದ್ದಾರೆ.

ಪ್ರತಿವರ್ಷ 3 ಸಿಲಿಂಡರ್ ಉಚಿತ

ಪ್ರತಿ ವರ್ಷ ಮೂರು ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ನೀಡುವ ಭರವಸೆಯನ್ನು ಟಿಡಿಪಿ ನೀಡಿದೆ.

ಮಹಿಳೆಯರಿಗೆ ಉಚಿತ ಸಂಚಾರ

ಎಪಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪಯಣಕ್ಕೆ ಅವಕಾಶ – ಜಿಲ್ಲಾ ವ್ಯಾಪ್ತಿಗೆ ಮಾತ್ರ ಈ ಯೋಜನೆ ಅನ್ವಯ ಆಗಲಿದೆ ಎಂಬ ಷರತ್ತು ವಿಧಿಸಲಾಗಿದೆ.

ನಿರುದ್ಯೋಗಿಗಳಿಗೆ ಪ್ರತಿತಿಂಗಳು 3,000 ರೂ.

ಯುವಗಳಂ ನಿಧಿ ಹೆಸರಿನಲ್ಲಿ ಪ್ರತಿ ನಿರುದ್ಯೋಗಿಗೆ ಪ್ರತಿ ತಿಂಗಳು ೩ಸಾವಿರ ರೂಪಾಯಿ ಕೊಡುತ್ತೇವೆ. ಉದ್ಯೋಗ ಸೃಷ್ಟಿಸುತ್ತೇವೆ ಎಂದು ತೆಲುಗುದೇಶಂ ಪಾರ್ಟಿ ಘೋಷಣೆ ಮಾಡಿದೆ.

ರೈತರಿಗೆ ಪ್ರತಿವರ್ಷ 20,000 ರೂ.

ರೈತರಿಗೆ ಪ್ರತಿ ವರ್ಷ ೨೦ಸಾವಿರ ನೀಡುವ ಭರವಸೆಯನ್ನು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೀಡಿದ್ದಾರೆ.

ಸ್ಥಳೀಯ ಸಂಸ್ಥೆಗೆ ಸ್ಪರ್ಧೆ;ನಿಯಮ ಬದಲಾವಣೆ ಭರವಸೆ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಇರುವ ನಿಯಮವನ್ನು ತಿದ್ದುಪಡಿ ಮಾಡುತ್ತೇವೆ ಎಂದು ಟಿಡಿಪಿ ತಿಳಿಸಿದೆ. ಸದ್ಯ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೇ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ.
ADVERTISEMENT

Related Posts

Next Post
ADVERTISEMENT

Trend News

ಬೆಂಗಳೂರು ನಗರ ಸೇರಿ ಹಲವು ಜಿಲ್ಲೆಗಳಲ್ಲಿ 4 ದಿನ ಭಾರೀ ಮಳೆ ಎಚ್ಚರಿಕೆ

ಕರ್ನಾಟಕದಲ್ಲಿ ಮತ್ತೆ ಧಾರಾಕಾರ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಇವತ್ತಿನಿಂದ ಸೋಮವಾರ ಬೆಳಗ್ಗಿನವರೆಗೂ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 14ರಂದು ಬುಧವಾರ: ಬೆಂಗಳೂರು ನಗರ, ತುಮಕೂರು, ರಾಮನಗರ,...

Read more

ಕರ್ನಾಟಕ ಮಹಿಳಾ ಕಾಂಗ್ರೆಸ್​ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕ

ಕರ್ನಾಟಕ ಮಹಿಳಾ ಕಾಂಗ್ರೆಸ್​ ಘಟಕದ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ಅವರನ್ನು ನೇಮಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಮಗಳು ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರನ್ನು...

Read more

ವಯನಾಡು ದುರಂತ- ತಂದೆಯನ್ನು ಕಳೆದುಕೊಂಡ ನೋವು ನೆನೆದ ವಿಪಕ್ಷನಾಯಕ ರಾಹುಲ್ ಗಾಂಧಿ

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತವ ಪ್ರದೇಶಗಳಿಗೆ ಇಂದೂ ಸಹ ಲೋಕಸಭೆ ವಿಪಕ್ಷನಾಯಕ ರಾಹುಲ್ ಗಾಂಧಿ ಭೇಟಿ ನೀಡಿದರು. ಇದೊಂದು ಭಯಾನಕ ದುರಂತ ವಾಗಿದ್ದು, ಸಂತ್ರಸ್ತರ ಕಾಳಜಿ ವಹಿಸುವ...

Read more

CM ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ಮುಂದೂಡಿಕೆ – JDS ಘೋಷಣೆ

ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್​ ಜೊತೆಯಾಗಿ ನಡೆಸಬೇಕಿದ್ದ ಪಾದಯಾತ್ರೆ ಮುಂದೂಡಿಕೆಯಾಗಿದೆ....

Read more
ADVERTISEMENT
ADVERTISEMENT
error: Content is protected !!