ಲಂಚ ಸ್ವೀಕಾರ ಆರೋಪದಡಿಯಲ್ಲಿ ಬೆಂಗಳೂರಲ್ಲಿ ಸಂಚಾರಿ ಪೊಲೀಸ್ ಕಾನ್ಸ್ಸ್ಟೇಬಲ್ನ್ನು ಅಮಾನತು ಮಾಡಲಾಗಿದೆ.
ಆ ಸಂಚಾರಿ ಪೊಲೀಸ್ ಕಾನ್ಸ್ಸ್ಟೇಬಲ್ನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸರ ಕಚೇರಿ ಮಾಹಿತಿ ನೀಡಿದೆ.
ಯ್ಯೂಟ್ಯೂಬ್ ಚಾನೆಲ್ ವಿಜಯ್ ಟೈಮ್ಸ್ ವರದಿಗಾರರ ತಂಡ ಸಂಚಾರಿ ಪೊಲೀಸರ ಲಂಚಾವತಾರ ಸಂಬಂಧ ಲೈವ್ ವರದಿ ಮಾಡಿತ್ತು.
ಮಾಗಡಿ ರಸ್ತೆಯ ನೈಸ್ ಗೇಟ್ ಬಳಿಕ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಲಾರಿ ಚಾಲಕರಿಂದ ಲಂಚ ವಸೂಲಿ ಮಾಡ್ತಿದ್ದಾರೆ ಎಂದು ವರದಿ ಮಾಡಿತ್ತು.
ಕ್ಯಾಮರಾ ನೋಡ್ತಿದ್ದಂತೆ ಕಿತ್ತಕೊಳ್ಳಲು ಯತ್ನಿಸಿದ್ದ ಆ ಟ್ರಾಫಿಕ್ ಪೊಲೀಸ್ ಬಳಿಕ ರಸ್ತೆಯಲ್ಲೇ ಸಾರ್ವಜನಿಕರ ಎದುರು ಓಡಿಹೋಗಿದ್ದ.
ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ADVERTISEMENT
ADVERTISEMENT