ಪ್ರಯಾಣಿಕರ ಕೊರತೆ ಕಾರಣ ನೀಡಿ ರೈಲ್ವೆ ಇಲಾಖೆ ಬೆಂಗಳೂರು ನಗರದಲ್ಲಿ ಓಡಾಡುವ 10 ಉಪ ನಗರ ರೈಲುಗಳನ್ನು ರದ್ದುಗೊಳಿಸಿದೆ.
ಕೆಎಸ್ಆರ್ ಬೆಂಗಳೂರು-ದೇವನಹಳ್ಳಿ, ದೇವನಹಳ್ಳಿ-ಯಲಹಂಕ, ಯಲಂಹಕ-ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್, ಬೆಂಗಳೂರು-ಕಂಟೋನ್ಮೆಂಟ್, ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ, ದೇವನಹಳ್ಳಿ-ಯಲಹಂಕ, ಯಲಹಂಕ-ದೇವನಹಳ್ಳಿ, ದೇವನಹಳ್ಳಿ-ಕೆಎಸ್ಆರ್ ಬೆಂಗಳೂರು
ನಡುವೆ ಸಂಚರಿಸುತ್ತಿದ್ದ 10 ಮೆಮೂ ಟ್ರೈನ್ಗಳನ್ನು ರದ್ದುಗೊಳಿಸಲಾಗಿದೆ.
ಈ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಶೇಕಡಾ 5ಕ್ಕಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ಮೆಮು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿಕೊಂಡಿದೆ.
ಬೆಂಗಳೂರು ನಗರಕ್ಕೆ ಓಡಾಡುವ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲದ ರೈಲುಗಳ ವೇಳಾಪಟ್ಟಿ, ಈ ರೈಲುಗಳ ಓಡಾಟದಲ್ಲಿ ಸಮಯ ಪಾಲನೆ ಆಗುತ್ತಿಲ್ಲ ಅಸಮಾಧಾನ ಮತ್ತು ಒಂದೇ ಭಾಗವನ್ನು ಟಾರ್ಗೆಟ್ ಮಾಡಿ ರೈಲುಗಳ ಓಡಾಟವೇ ಪ್ರಯಾಣಿಕರ ಸ್ಪಂದನೆ ಸಿಗದೇ ಇರುವುದಕ್ಕೆ ಕಾರಣ ಎಂದು ಹೇಳಲಾಗಿದೆ.