ADVERTISEMENT
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಬರಹವನ್ನು ಹಾಕಿದ್ದ ಕಿಡಿಗೇಡಿಯನ್ನು ರಾಯಚೂರು ಜಿಲ್ಲೆಯ ಲಿಂಗಸುಗೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ದುಷ್ಕರ್ಮಿಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಎಂದು ಗುರುತಿಸಲಾಗಿದೆ.
ಮುಸಲ್ಮಾನರು ಹೆಣ್ಣುಮಕ್ಕಳು ಬರೀ ಮಕ್ಕಳನ್ನು ಹೇರುವ ಮೆಷಿನ್ ಎಂದು ರಾಜು ತನ್ನ WhatsAppನಲ್ಲಿ ಪ್ರಚೋದನಕಾರಿ, ಅನ್ಯ ಧರ್ಮದ ನಿಂದನೆಯ ಸ್ಟೇಟಸ್ ಹಾಕಿದ್ದ.
ದುಷ್ಕರ್ಮಿ ರಾಜುನನ್ನ ಬಂಧಿಸುವಂತೆ ಲಿಂಗಸುಗೂರು ಠಾಣೆ ಎದುರು ಪ್ರತಿಭಟನೆ ನಡೆಸಿದ ಬಳಿಕ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ಬಂಧಿಸಿದ್ದಾರೆ.
ರಾಜುನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ADVERTISEMENT