ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿರ್ಧಾರ ಕೈಗೊಂಡಿದೆ. ಸಿಎಂ ಅವರ ನೇತೃತ್ವದಲ್ಲಿ ನಡೆಸಲಾದ ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಗೃಹ ಜ್ಯೋತಿ ಯೋಜನೆ ಅಂದರೆ 200 ಯುನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಜುಲೈ 1ರಿಂದ ಬಳಕೆ ಮಾಡಲಾಗುವ ವಿದ್ಯುತ್ ಬಳಕೆಗೆ ಶುಲ್ಕ ವಿನಾಯಿತಿ ನೀಡಲಾಗುತ್ತದೆ.
ಇನ್ಮುಂದೆ ವಿದ್ಯುತ್ ಶುಲ್ಕ ಕಟ್ಟುವ ಅಗತ್ಯವೇನಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ವರ್ಷಕ್ಕೆ ಕುಟುಂಬವೊಂದು ಬಳಸುವ ಸರಾಸರಿ ವಿದ್ಯುತ್ನ ಪ್ರಮಾಣ ಶೇಕಡಾ 10ರಷ್ಟು ಹೆಚ್ಚುವರಿ ಸೇರ್ಪಡೆಗೊಳಿಸಿ ವಿದ್ಯುತ್ ಶುಲ್ಕ ವಿನಾಯಿತಿಯನ್ನು ಜಾರಿಗೊಳಿಸಲಾಗುತ್ತದೆ.
200 ಯುನಿಟ್ವರೆಗಿನ ವಿದ್ಯುತ್ ಬಳಕೆಗೆ ಶುಲ್ಕ ಕಟ್ಟಬೇಕಿಲ್ಲ ಎಂದು ಸಿಎಂ ಘೋಷಿಸಿದ್ದಾರೆ.
ಜುಲೈ 31ರವರೆಗಿನ ವಿದ್ಯುತ್ ಶುಲ್ಕ ಬಾಕಿ ಗ್ರಾಹಕರು ಕಟ್ಟಬೇಕಾಗುತ್ತದೆ.
ADVERTISEMENT
ADVERTISEMENT