ADVERTISEMENT
ಒಡಿಶಾ ರಾಜ್ಯದ ಬಾಲಸೋರ್ನಲ್ಲಿ ಸಂಭವಿಸಿದ್ದ ಭೀಕರ ರೈಲು ಅಫಘಾತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 233ಕ್ಕೆ ಏರಿಕೆ ಆಗಿದೆ.
900 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಜ್ಯದಲ್ಲಿ ಒಂದು ದಿನದ ಶೋಕಾಚಾರಣೆ ಘೋಷಿಸಿದ್ದಾರೆ.
ಸ್ವತಂತ್ರ ಭಾರತದ ಇತಿಹಾಸದಲ್ಲೇ ಸಂಭವಿಸಿದ ನಾಲ್ಕನೇ ಭೀಕರ ರೈಲು ಅಪಘಾತ ಇದಾಗಿದೆ.
1981ರಲ್ಲಿ ಬಿಹಾರದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ 750 ಮಂದಿ ಪ್ರಾಣ ಕಳೆದುಕೊಂಡಿದ್ದರು. ಫಿರೋಜಾಬಾದ್ನಲ್ಲಿ 1995ರಲ್ಲಿ ಸಂಭವಿಸಿದ ದುರಂತದಲ್ಲಿ 358 ಮಂದಿ ಜೀವ ಕಳೆದುಕೊಂಡಿದ್ದರು.
ಗೈಸಾಲ್ನಲ್ಲಿ 1999ರಲ್ಲಿ ಸಂಭವಿಸಿದ ಅಪಘಾತದಲ್ಲಿ 290 ಮಂದಿ, ಖನ್ನಾದಲ್ಲಿ 1998ರಲ್ಲಿ ಸಂಭವಿಸಿದ ದುರಂತದಲ್ಲಿ 212 ಮಂದಿ, 1964ರಲ್ಲಿ ರಾಮೇಶ್ವರಂನಲ್ಲಿ ಚಂಡಮಾರುತದ ಕಾರಣದಿಂದ ಪಂಬನ್ ಸೇತುವೆ ಅಪಘಾತದಲ್ಲಿ 150 ಮಂದಿ 2010ರಲ್ಲಿ ಜ್ಞಾನೇಶ್ವರಿ ರೈಲು ದುರಂತದಲ್ಲಿ 148 ಮಂದಿ ಸಾವನ್ನಪ್ಪಿದ್ದರು.
ADVERTISEMENT