ಮಹಿಳೆಯರಿಗೆ ಅವರ ಸ್ವತಂಹ ದೇಹದ ಮೇಲೆ ಹಕ್ಕು ಇಲ್ಲದಂತಾಗುತ್ತಿದೆ ಎಂದು ಕೇರಳ ಹೈಕೋರ್ಟ್ ವ್ಯಾಖ್ಯಾನಿಸಿದೆ. ತಮ್ಮ ಶರೀರಕ್ಕೆ ಸಂಬಂಧಿಸಿ ಯಾವುದೇ ತೆರನಾದ ನಿರ್ಣಯವನ್ನು ತೆಗೆದುಕೊಳ್ಳುವ ಹಕ್ಕು ಮಹಿಳೆಯರಿಗೆ ಇರುತ್ತದೆ ಎಂದು ಸ್ಪಷ್ಟಪಡಿಸಿದೆ. ಅದು ಅವರಿಗೆ ಸಂವಿಧಾನದ 21ನೇ ವಿಧಿ ಅನ್ವಯ ನೀಡಲಾದ ವೈಯಕ್ತಿಕ ಸ್ವೇಚ್ಛೆಯ ಪರಿಧಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ. ನಗ್ನತೆ.. ಅಶ್ಲೀಲತೆಗೆ ಪರ್ಯಾಯ ಪದವಲ್ಲ ಎಂದು ಕೂಡ ವ್ಯಾಖ್ಯಾನಿಸಿದೆ.
ಕೇರಳದ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ವಿರುದ್ಧದ ಪೋಕ್ಸೋ, ಜ್ಯುವೆನಲ್ ಆಕ್ಟ್, ಐಟಿ ಆಕ್ಟ್ ಆಡಿ ದಾಖಲಾಗಿದ್ದ ಕೇಸ್ಗಳ ವಿಚಾರಣೆಯ ಭಾಗವಾಗಿ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಈ ವ್ಯಾಖ್ಯಾನಗಳನ್ನು ಮಾಡಿದ್ದಾರೆ. ಅಲ್ಲದೇ, ಈ ಆರೋಪಗಳಿಂದ ರೆಹಾನಾ ಫಾತಿಮಾ ಅವರಿಗೆ ಮುಕ್ತಿ ಕಲ್ಪಿಸಿದ್ದಾರೆ. ಎಲ್ಲಾ ಪ್ರಕರಣವನ್ನು ವಜಾ ಮಾಡಿದ್ದಾರೆ.
ಆಕೆ ತನ್ನ ದೇಹವನ್ನು ತನ್ನ ಮಕ್ಕಳಿಗೆ ಕ್ಯಾನ್ವಾಸ್ನಂತೆ ಉಪಯೋಗಿಸಿಕೊಳ್ಳಲು ನೀಡಿದ್ದಾರೆ. ಇದನ್ನು ತನ್ನ ಲೈಂಗಿಕ ಭಾವನೆಗಳನ್ನು ತೃಪ್ತಿಪಡಿಸಿಕೊಳ್ಳಲು ಆಕೆ ಹೀಗೆ ಮಾಡಿದ್ದಾರೆ ಎಂದು ಯಾರು ಭಾವಿಸಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪುರುಷನ ದೇಹದ ಮೇಲ್ಭಾಗ ನಗ್ನವಾಗಿದ್ದರೂ ಅದನ್ನು ಲೈಂಗಿಕ ದೃಷ್ಟಿಯಿಂದ ಸಮಾಜ ನೋಡಲ್ಲ. ಆದರೆ, ಮಹಿಳೆಯ ವಿಚಾರದಲ್ಲಿ ಮಾತ್ರ ಅದಕ್ಕೆ ಭಿನ್ನವಾಗಿ ಸಮಾಜ ವರ್ತಿಸುತ್ತದೆ. ಈ ಭಾವನೆಯನ್ನು ಧಿಕ್ಕರಿಸಲೆಂದೇ ತಾನು ಬಾಡಿ ಪೇಂಟಿಂಗ್ ವೀಡಿಯೋ ಅಪ್ಲೋಡ್ ಮಾಡಿದ್ದಾಗಿ ರೆಹನಾ ಫಾತಿಮಾ ಮಾಡಿದ ವಾದವನ್ನು ಏಕೀಭವಿಸಿದೆ.
ನ್ಯಾಯಾಲಯದ ಪ್ರಮುಖ ವ್ಯಾಖ್ಯಾನಗಳು
- ಪುರುಷರ ಅರೆನಗ್ನ ದೇಹವನ್ನು ಸಹಜ ಎನ್ನಲಾಗಿದೆ.. ಆದರೆ ಹೆಣ್ಣಿನ ದೇಹವನ್ನು ಅತಿಯಾಗಿ ಲೈಂಗಿಕವಾಗಿಸಲಾಗಿದೆ.
- ಪ್ರತಿಯೊಬ್ಬ ಪೋಷಕರಿಗೆ ತಮ್ಮ ಮಕ್ಕಳನ್ನು ಅವರು ಬಯಸಿದ ರೀತಿಯಲ್ಲಿ ಬೆಳೆಸುವ ಹಕ್ಕಿದೆ.
- ನಗ್ನತೆಯನ್ನು ತನ್ನಿಂತಾನೇ ಅಶ್ಲೀಲತೆಯೊಂದಿಗೆ ತಳಕು ಹಾಕಬಾರದು. ಬದಲಿಗೆ ಅದನ್ನು ಸಂದರ್ಭಾನುಸಾರ ನೋಡಬೇಕಾಗುತ್ತದೆ.
- ದೇಗುಲ ಅಥವಾ ಇತರೆ ಸಾರ್ವಜನಿಕ ಸ್ಥಳಗಳಲ್ಲಿನ ನಗ್ನ ಸ್ತ್ರೀ ಶಿಲ್ಪಗಳನ್ನು ಕಲೆ ಅಥವಾ ಪವಿತ್ರವೆಂದು ಪರಿಗಣಿಸಲಾಗುತ್ತದೆ.
- ತನ್ನ ದೇಹದ ಬಗ್ಗೆ ಸ್ವಯತ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಹಿಳೆಯ ಹಕ್ಕು ಸಮಾನತೆ ಮತ್ತು ಮೂಲಭೂತ ಹಕ್ಕಿನ ಅತ್ಯಂತ ಪ್ರಮುಖ ತಿರುಳಾಗಿದೆ.
- ಪ್ರತಿಯೊಬ್ಬ ವ್ಯಕ್ತಿಯು ಅವನ/ಅವಳ ದೇಹದ ಸ್ವಾಯತ್ತತೆಗೆ ಅರ್ಹನಾಗಿರುತ್ತಾನೆ.. ಇದು ಲಿಂಗಕ್ಕೆ ಸಂಬಂಧಿಸಿದ ಆಯ್ಕೆಯಲ್ಲ.
- ಸೌಂದರ್ಯ ನೋಡುಗರ ಕಣ್ಣಲ್ಲಿರುವಂತೆ ಅಶ್ಲೀಲತೆಯೂ ನೋಡುಗರ ಕಣ್ಣಿನಲ್ಲಿರುತ್ತದೆ.
- ಪುರುಷರು ಅಂಗಿ ತೊಡದೆ ತಿರುಗಾಡುತ್ತಾರೆ. ಆದರೆ ಇಂತಹ ಕೃತ್ಯವನ್ನು ಎಂದಿಗೂ ಅಶ್ಲೀಲ ಅಥವಾ ಅಸಭ್ಯ ಎಂದು ಸಮಾಜ ಪರಿಗಣಿಸುವುದಿಲ್ಲ.
ರೆಹಾನಾ ಫಾತಿಮಾ ಕೆಲ ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಪೋಸ್ಟ್ ಮಾಡಿದ್ದರು. ಆಕೆ ಬೆತ್ತಲೆಯಾಗಿ ಮಲಗಿರುವಾಗ ಆಕೆಯ ಪುತ್ರ, ಆಕೆಯ ದೇಹದ ಮೇಲೆ ಪೇಂಟಿಂಗ್ ಮಾಡುವ ದೃಶ್ಯಗಳು ಆಗ ಭಾರೀ ಟೀಕೆ, ಆಕ್ರೋಶಕ್ಕೆ ಕಾರಣವಾಗಿದ್ದವು. ರೆಹಾನಾ ಫಾತಿಮಾ ವಿರುದ್ಧ ಹಲವೆಡೆ ಪ್ರಕರಣಗಳು ದಾಖಲಾಗಿದ್ದವು.
ADVERTISEMENT
ADVERTISEMENT