ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಮನೆ ಬಾಡಿಗೆದಾರರೂ ಉಚಿತ ವಿದ್ಯುತ್ನ ಲಾಭ ಪಡೆಯಲು ಅರ್ಹರಾಗಿದ್ದಾರೆ.
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಸೋಮವಾರ ಇಂಧನ ಇಲಾಖೆ ಮಾರ್ಗಸೂಚಿ ಹೊರಡಿಸಿತ್ತು.
ಆ ಮಾರ್ಗಸೂಚಿ ಪ್ರಕಾರ ಬಾಡಿಗೆ ಮನೆಯಲ್ಲಿರುವವರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಮಾಡಬೇಕಿರುವುದು ಇಷ್ಟೇ.
1. ಬಾಡಿಗೆ ಇರುವ ಮನೆಯ ವಿದ್ಯುತ್ ಮೀಟರ್ನ ಆರ್ ಆರ್ ಸಂಖ್ಯೆಯೊಂದಿಗೆ ಬಾಡಿಗೆದಾರರು ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬೇಕು.
2. ತಾವು ಬಾಡಿಗೆದಾರರು ಎಂದು ದೃಢೀಕರಿಸಲು ಬಾಡಿಗೆ ಕರಾರರು ಪತ್ರವನ್ನೂ ಸೇವಾ ಸಿಂಧುನಲ್ಲಿ ಅರ್ಜಿ ಸಲ್ಲಿಕೆ ವೇಳೆ ಅಪ್ಲೋಡ್ ಮಾಡಬೇಕು.
3. ಒಂದು ಆರ್ ಆರ್ ಸಂಖ್ಯೆಯೊಂದಿಗೆ ಒಂದು ಆಧಾರ್ ಸಂಖ್ಯೆಯನ್ನಷ್ಟೇ ಜೋಡಿಸಲು ಅವಕಾಶವಿದೆ.
4. ಒಂದು ವೇಳೆ ಮನೆ ಬದಲಾಯಿಸಿದರೆ ಆಗ ಈ ಹಿಂದಿನ ಮನೆಯ ಆರ್ ಆರ್ ಸಂಖ್ಯೆಯೊಂದಿಗೆ ಮಾಡಲಾಗಿರುವ ಆಧಾರ್ ಲಿಂಕ್ನ್ನು ನಿಷ್ಕ್ರಿಯಗೊಳಿಸಬೇಕು.
5. ಹೊಸ ಬಾಡಿಗೆ ಮನೆಗೆ ಹೋದರೆ ಆಗ ಮತ್ತೆ ಆ ಮನೆಯ ಆರ್ ಆರ್ ಸಂಖ್ಯೆಯ ಮತ್ತೆ ತಮ್ಮ ಆಧಾರ್ ಸಂಖ್ಯೆಯನ್ನು ಜೋಡಿಸಿ ಮತ್ತೆ ಆ ಬಾಡಿಗೆ ಮನೆಯ ಕರಾರುಪತ್ರವನ್ನು ಅಪ್ಲೋಡ್ ಮಾಡಬೇಕು.
ADVERTISEMENT
ADVERTISEMENT