ADVERTISEMENT
ವಿಲ್ ಅಥವಾ ಪವರ್ ಆಫ್ ಅಟಾರ್ನಿ (GPA)ಯನ್ನು ಸ್ಥಿರಾಸ್ತಿಯೊಂದರ ಮಾಲೀಕತ್ವದ ಹಸ್ತಾಂತರದ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ದಿಪಾಂಕರ್ ದತ್ತ ಮತ್ತು ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠ ಗ್ಯಾನ್ಶ್ಯಾಮ್ ಮತ್ತು ಯೋಗೇಂದ್ರ ರಾಥಿ ಪ್ರಕರಣದಲ್ಲಿ ತೀರ್ಪು ನೀಡಿದೆ.
ವಿಲ್ ಅಥವಾ ಜನರಲ್ ಪವರ್ ಆಫ್ ಅಟಾರ್ನಿಯನ್ನು ಸ್ಥಿರಾಸ್ತಿಯ ಮಾಲೀಕತ್ವದ ದಾಖಲೆ ಎಂದು ಪರಿಗಣಿಸುವುದು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಮಾರಾಟ ಮಾಡುವ ಒಪ್ಪಂದ (Agreement to Sell) ಆಸ್ತಿ ಮಾಲೀಕತ್ವದ ದಾಖಲೆ ಅಲ್ಲ ಅಥವಾ ಆಸ್ತಿ ಹಸ್ತಾಂತರದ ಡೀಡ್ ಕೂಡಾ ಅಲ್ಲ. ವಿಲ್ ಮೃತಪಟ್ಟ ಬಳಿಕವಷ್ಟೇ ಜಾರಿಯಾಗುತ್ತದೆ. ಬದುಕಿರುವಾಗ ವಿಲ್ ಜಾರಿಯಲ್ಲಿರಲು ಅವಕಾಶ ಇರದ ಕಾರಣ ವಿಲ್ ಆಧರಿಸಿ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ADVERTISEMENT