ಅರಬ್ಬಿ ಸಮುದ್ರದ ಗೋವಾ ಭಾಗದಲ್ಲಿ ರೂಪುಗೊಂಡಿರುವ ಬಿಪರ್ಜಾಯ್ ಹೆಸರಿನ ಚಂಡಮಾರುತ ಇವತ್ತು ಸಂಜೆ ವೇಳೆಗೆ ತೀವ್ರತೆಯನ್ನು ಪಡೆದುಕೊಳ್ಳಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗಂಟೆಗೆ 80ರಿಂದ 90 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ಇವತ್ತು ಸಂಜೆ ವೇಳೆಗೆ ಬಿರುಗಾಳಿ ವೇಗ ಗಂಟೆಗೆ 105ರಿಂದ 125 ಕಿಲೋ ಮೀಟರ್ ವೇಗ ಇರಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಈ ಚಂಡಮಾರುತದ ಕಾರಣದಿಂದ ಕರ್ನಾಟಕದ ಕರಾವಳಿ ಭಾಗ, ಉತ್ತರ ಕೇರಳ ಮತ್ತು ಗೋವಾ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.
ಮುಂಗಾರು ವಿಳಂಬ:
ಈ ಚಂಡಮಾರುತದ ಕಾರಣದಿಂದಾಗಿ ದೇಶದಲ್ಲಿ ಮುಂಗಾರು ಆರಂಭ ವಿಳಂಬವಾಗಿದೆ. ಕೇರಳದಲ್ಲಿ ಮುಂಗಾರು ಪ್ರವೇಶ 1 ವಾರ ವಿಳಂಬವಾಗಿದೆ. ಜೂನ್ 8 ಅಥವಾ 9ರಂದು ಮುಂಗಾರು ಪ್ರವೇಶ ಆಗಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಮುಂಗಾರು ಪ್ರವೇಶದ ತೀವ್ರತೆಯೂ ಕಡಿಮೆ ಇರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಬಿಪರ್ಜಾಯ್ ಎಂದರೆ ಏನರ್ಥ..?
ಈ ಚಂಡಮಾರುತಕ್ಕೆ ಹೆಸರು ಕೊಟ್ಟಿದ್ದು ಬಾಂಗ್ಲಾದೇಶ. ಬಿಪರ್ಜಾಯ್ ಎಂದರೆ ವಿನಾಶ ಅಥವಾ ಅನಾಹುತ ಎಂದರ್ಥ.
ADVERTISEMENT
ADVERTISEMENT