ADVERTISEMENT
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಖರೀದಿಯಲ್ಲಾಗಿರುವ ಅಕ್ರಮ ಸಂಬಂಧ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮುದ್ದಯ್ಯ ಎಸ್, ತಾಂತ್ರಿಕ ವ್ಯವಸ್ಥಾಪಕರಾಗಿದ್ದ ಬಿ ಜಿ ಶ್ರೀಧರ್, ನಿಗಮದ ಎಸ್ಟೇಟ್ ಆಫೀಸರ್ ಬಿ ಲಕ್ಷ್ಮಣ ಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಭಾರತೀಯ ಅಪರಾಧ ದಂಡ ಸಂಹಿತೆಯ ಕಲಂ 406, 420, 34ರಡಿಯಲ್ಲಿ ಜೂನ್ 6ರಂದು ಎಫ್ಐರ್ ದಾಖಲಾಗಿದೆ.
ಎರಡು ಆರೋಪಗಳು:
1. 2021-22ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳ 1 ರಿಂದ 10ರಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆಯಲ್ಲಿ ಅಕ್ರಮ ಎಸಗಲಾಗಿದ್ದು, ನಿಗಮದಿಂದ ಕಳಪೆ ಗುಣಮಟ್ಟದ ಸಮವಸ್ತ್ರವನ್ನು ಪೂರೈಸಲಾಗಿದೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ.
2. ಬೆಂಗಳೂರಿನ ಪೀಣ್ಯ ಎರಡನೇ ಹಂತದಲ್ಲಿರುವ ಪ್ರಿಯದರ್ಶಿನಿ ಸಂಸ್ಕರಣಾ ಕೇಂದ್ರದ ಶೆಡ್ಗಳನ್ನು ನಿಯಮ ಉಲ್ಲಂಘಿಸಿ 22 ವರ್ಷದ ಮಟ್ಟಿಗೆ ಬಾಡಿಗೆ ನೀಡಿದ್ದಾರೆ ಎಂದು ಎಫ್ಐಆರ್ನಲ್ಲಿ ದೂರಲಾಗಿದೆ.
ADVERTISEMENT