ಆ ನಟ ಹೆಣ್ಣು ಬಾಕ, ಬಿಳಿ ಇಲಿ, ಡ್ರಗ್ ವ್ಯಸನಿ. ಇದು ಬಾಲಿವುಡ್ ನಟಿ ಕಂಗನಾ ರಣಾವತ್ ಇವತ್ತು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಬರಹ.
ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ನಟಿಸಲಿರುವ ರಣಬೀರ್ ಕಪೂರ್ ಬಗ್ಗೆ ಪರೋಕ್ಷವಾಗಿ ನಟಿ ಕಂಗನಾ ಮಾಡಿರುವ ಆರೋಪ.
ಬಾಲಿವುಡ್ನಲ್ಲಿ ರಾಮಾಯಣ ಎಂಬ ಸಿನಿಮಾವೊಂದು ಬರುತ್ತಿರುವ ಬಗ್ಗೆ ಇತ್ತೀಚೆಗೆ ಸುದ್ದಿ ತಿಳಿಯಿತು. ಬಳಿ ಚರ್ಮದ ಇಲಿ (ನಟನೆಂದು ಕರೆಸಿಕೊಂಡಿರುವ). ಈತ ಹೆಣ್ಣು ಬಾಕ ಮತ್ತು ಮಾದಕ ವ್ಯಸನಿ ಮತ್ತು ತನ್ನನ್ನು ತಾನು ಶಿವನೆಂದು ಕರೆಸಿಕೊಳ್ಳುವ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಈ ಚಿತ್ರದಲ್ಲಿ ರಾಮನ ವೇಷ ಧರಿಸುತ್ತಿದ್ದಾನೆ.
ಸ್ವಯಂಪರಿಶ್ರಮದಿಂದ ಮೇಲೆ ಬಂದಿರುವ ದಕ್ಷಿಣ ಭಾರತದ ಸೂಪರ್ಸ್ಟಾರ್, ಸಂಪ್ರದಾಯಿಕ ಕುಟುಂಬಸ್ಥನಾಗಿರುವ ನಟ ವಾಲ್ಮೀಕಿ ರಾಮಾಯಣದ ಪ್ರಕಾರ ಭಗವಾನ್ ರಾಮನ ಪಾತ್ರಕ್ಕೆ ಹೊಂದುವ ಗುಣಲಕ್ಷಣಗಳು ಮತ್ತು ಮುಖ ಲಕ್ಷಣಗಳು ಹೊಂದುತ್ತಿವೆ, ಆದರೆ ಅವರಿಗೆ ರಾವಣನ ಪಾತ್ರವನ್ನು ನೀಡಲಾಗಿದೆ. ಇದು ಯಾವ ಸೀಮೆಯ ಕಲಿಯುಗ..? ಬಿಳಿ ಚರ್ಮದ ಮಾದಕ ವ್ಯಸನಿ ಹುಡುಗ ರಾಮನ ಪಾತ್ರ ಮಾಡುವುದು ಬೇಡ.. ಜೈಶ್ರೀರಾಮ್
ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ಈ ಮೂಲಕ ರಣಬೀರ್ ಕಪೂರ್ ಮಾದಕ ವ್ಯಸನಿ, ಹೆಣ್ಣು ಬಾಕ, ಮಹಿಳೆಯರಿಗೆ ಕಿರುಕುಳ ನೀಡುವವ ಎಂದು ಬಹಿರಂಗ ಆರೋಪ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಬದಲು ರಾಮನ ಪಾತ್ರಕ್ಕೆ ಸೂಕ್ತ ಎಂಬ ವಾದ ಮಂಡಿಸಿದ್ದಾರೆ.
ADVERTISEMENT
ADVERTISEMENT