ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ದರ ಹೆಚ್ಚಳವಾಗಿದೆ. ಜೂನ್ 1ರಿಂದಲೇ ಟೋಲ್ ದರ ಏರಿಕೆಯಾಗಿದೆ. ಟೋಲ್ ದರವನ್ನು ಬರೋಬ್ಬರೀ ಶೇಕಡಾ 22ರಷ್ಟು ಹೆಚ್ಚಳ ಮಾಡಲಾಗಿದೆ.
ಫ್ಯಾಸ್ಟ್ಯಾಗ್ ಮೂಲಕ ಟೋಲ್ ವಸೂಲಿ ಮಾಡ್ತಿರುವ ಹಿನ್ನೆಲೆಯಲ್ಲಿ ದರ ಹೆಚ್ಚಳ ವಾಹನ ಸವಾರರಿಗೆ ತಡವಾಗಿ ಗಮನಕ್ಕೆ ಬಂದಿದೆ.
ವಾಹನ |
ಹಳೆ ದರ |
ಹೊಸ ದರ |
ಹೆಚ್ಚಳ |
ಕಾರು, ವ್ಯಾನ್, ಜೀಪ್ |
135 |
165 |
30 |
ಲಘುವಾಹನ, ಮಿನಿಬಸ್ |
220 |
270 |
50 |
ಟ್ರಕ್, ಬಸ್, 2 ಎಕ್ಸೆಲ್ ವಾಹನ |
460 |
565 |
105 |
3 ಎಕ್ಸೆಲ್ ವಾಹನ |
500 |
615 |
115 |
ಭಾರೀ ವಾಹನಗಳು |
720 |
885 |
165 |
7 ಅಥವಾ ಹೆಚ್ಚು ಎಕ್ಸೆಲ್ ವಾಹನ |
880 |
1080 |
200 |
ಏಪ್ರಿಲ್ 1ರಿಂದಲೇ ಟೋಲ್ ಹೆಚ್ಚಳ ಮಾಡಿತ್ತಾದರೂ ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಟೋಲ್ ದರ ಹೆಚ್ಚಳ ವಾಪಸ್ ಪಡೆದಿತ್ತು.
ಆದರೆ ಈಗ ಜೂನ್ 1ರಿಂದಲೇ ಚುನಾವಣೆ ಮುಗಿಯುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದರ ಹೆಚ್ಚಳ ಮಾಡಿದೆ.
ADVERTISEMENT
ADVERTISEMENT