ಪ್ಯಾನ್ ಕಾರ್ಡ್ (Permanent Account Number)ಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದಕ್ಕೆ ಇದೇ ತಿಂಗಳು ಅಂದರೆ ಜೂನ್ 30 ಕಡೆಯ ದಿನ.
ಮಾರ್ಚ್ 31ರಂದು ಕಡೆಯ ದಿನವಾಗಿತ್ತು. ಆದರೆ ಆದಾಯ ತೆರಿಗೆ ಇಲಾಖೆಯ ಪೋರ್ಟಲ್ನಲ್ಲಿ ತಾಂತ್ರಿಕ ಸಮಸ್ಯೆಗಳಿದ್ದ ಕಾರಣ ಜೋಡಣೆ ಅವಧಿಯನ್ನು ಮೂರು ತಿಂಗಳು ವಿಸ್ತರಣೆ ಮಾಡಲಾಯಿತು.
1 ಸಾವಿರ ರೂಪಾಯಿ ವಿಳಂಬ ಶುಲ್ಕದೊಂದಿಗೆ ಆಧಾರ್ ಜೋಡಣೆ ಮಾಡಬೇಕಾಗುತ್ತದೆ.
ಜೂನ್ 30ರೊಳಗೆ ಪ್ಯಾನ್ಗೆ ಆಧಾರ್ ಜೋಡಣೆ ಮಾಡದೇ ಹೋದರೆ ಜುಲೈ 1ರಿಂದ ಪ್ಯಾನ್ ಕಾರ್ಡ್ ನಿಷ್ಕ್ರಿಯ ಆಗಲಿದೆ
ಪ್ಯಾನ್ ನಿಷ್ಕ್ರಿಯವಾದರೆ ಎಲ್ಲ ರೀತಿಯ ಬ್ಯಾಂಕಿಂಗ್ ವ್ಯವಹಾರಗಳಿಗೆ ತೊಂದರೆ ಆಗಬಹುದು. ಸರ್ಕಾರದಿಂದ ಸಿಗುವ ಯೋಜನೆಯ ಲಾಭ ಪಡೆಯಲು ಅನಾನುಕೂಲ ಆಗಬಹುದು.
ಉದಾಹರಣೆಗೆ ಕರ್ನಾಟಕದಲ್ಲಿ ಜಾರಿ ಆಗಲಿರುವ ಗೃಹ ಲಕ್ಷ್ಮೀ ಮತ್ತು ಯುವ ನಿಧಿ ಯೋಜನೆಗೆ ಬ್ಯಾಂಕ್ ದಾಖಲೆ ಮತ್ತು ಆಧಾರ್ ಮಾಹಿತಿ ಕೊಡುವುದು ಕಡ್ಡಾಯ.
ಒಂದು ವೇಳೆ ಪ್ಯಾನ್ ನಿಷ್ಕ್ರಿಯವಾದರೆ ಆಗ ಬ್ಯಾಂಕ್ ಖಾತೆಗಳಿಗೂ ತೊಂದರೆ ಆಗಲಿದೆ.
ಒಬ್ಬ ವ್ಯಕ್ತಿ ತಮ್ಮ ಹೆಸರಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದು ಗೊತ್ತಾದರೆ ಅವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ADVERTISEMENT
ADVERTISEMENT