ADVERTISEMENT
ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ಒಂದು ತಿಂಗಳಾಗಿದೆ. ಫಲಿತಾಂಶ ಪ್ರಕಟವಾದ ದಿನವೇ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ರಾಜೀನಾಮೆ ನೀಡಿತ್ತು.
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ತಿಂಗಳಾಗುತ್ತ ಬರುತ್ತಿದೆ. ಆದರೆ ರಾಜ್ಯ ಸರ್ಕಾರದ ಪೋರ್ಟಲ್ನಲ್ಲಿ ಇನ್ನೂ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಉಳಿದುಕೊಂಡಿದ್ದಾರೆ.
ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಫಲಾನುಭವಿಗಳ ಬಗ್ಗೆ ಮಾಹಿತಿ ನೀಡುವ ಕರ್ನಾಟಕ ಮಾಹಿತಿ ಕಣಜ ಪೋರ್ಟಲ್ನಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳು ಎಂದೇ ಇದೆ.
ಸರ್ಕಾರದ ಬದಲಾದ ಬಳಿಕ ಮುಖ್ಯಮಂತ್ರಿ ಮತ್ತು ಇಲಾಖಾ ಸಚಿವರ ಮಾಹಿತಿಗಳು ಬದಲಾಗುವುದು ನಿಯಮ. ಆದರೆ ಮಾಹಿತಿ ಕಣಜ ಪೋರ್ಟಲ್ನಲ್ಲೇ ಮಾಹಿತಿ ಬದಲಾಗಿಲ್ಲ.
ADVERTISEMENT