ಹೆಂಡತಿಯನ್ನು ಮನೆಗೆ ಕಳುಹಿಸಲು ಒಪ್ಪದ ಅತ್ತೆಗೆ ಅಳಿಯ ಚಾಕುವಿನಿಂದ ಇರಿದಿದ್ದಾನೆ. ಬೆಂಗಳೂರಿನ ಇಬ್ಬಲೂರಿನಲ್ಲಿ ಕೃತ್ಯ ನಡೆದಿದೆ.
ಮೂರು ವರ್ಷಗಳ ಹಿಂದೆ ಮನೋಜ್ ಎಂಬಾತ ವರ್ಷಿತಾಳನ್ನು ಪ್ರೀತಿಸಿ ಮದುವೆ ಆಗಿದ್ದ. ಆದರೆ ಪ್ರೀತಿಸಿ ಮದುವೆಯಾದ ಗಂಡ ಕೆಲಸ ಮಾಡುತ್ತಿಲ್ಲ ಎಂದು ಹೇಳಿ ವರ್ಷಿತಾ ತಾಯಿ ಮನೆ ಸೇರಿಕೊಂಡಿದ್ದಳು.
ಹೀಗಾಗಿ ಹೆಂಡತಿಯನ್ನು ಕರೆತರಲು ಮನೋಜ್ ಅತ್ತೆ ಮನೆಗೆ ಹೋಗಿದ್ದ. ಆಗ ಅತ್ತೆ ಮತ್ತು ಅಳಿಯನ ನಡುವೆ ಗಲಾಟೆ ಶುರುವಾಯಿತು.
ಸಿಟ್ಟಿನಲ್ಲಿದ್ದ ಅಳಿಯ ಅತ್ತೆ ಗೀತಾಗೆ ಚಾಕುವಿನಿಂದ ಇರಿದಿದ್ದಾನೆ. ಆರೋಪಿ ಅಳಿಯನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ADVERTISEMENT
ADVERTISEMENT