ರೈಲುಗಳಲ್ಲಿ ಪ್ರಯಾಣಿಕರ ಸ್ವತ್ತುಗಳು ಕಳುವಾದರೆ ಅದಕ್ಕೆ ರೈಲ್ವೆ ಇಲಾಖೆ ಹೊಣೆಗಾರ ಅಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಅಸಾದುದ್ದೀನ್ ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠ ತೀರ್ಪು ನೀಡಿದೆ.
ಪ್ರಯಾಣಿಕರ ಸ್ವತ್ತುಗಳು ಕಳುವಾದರೆ ಅದು ರೈಲ್ವೆ ನೀಡುವ ಸೇವೆಯಲ್ಲಿನ ಲೋಪ ಎಂದು ನಮಗೆ ಅರ್ಥವಾಗುತ್ತಿಲ್ಲ. ಒಂದು ವೇಳೆ ಪ್ರಯಾಣಿಕರು ತಮ್ಮ ಸ್ವತ್ತುಗಳನ್ನು ಸಂರಕ್ಷಿಸಿಕೊಳ್ಳಲು ವಿಫಲವಾದರೆ ಅದಕ್ಕೆ ರೈಲ್ವೆ ಇಲಾಖೆ ಹೊಣೆಯಲ್ಲ
ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಸುರೆಂದರ್ ಭೋಲಾ ಎನ್ನುವರರು ರೈಲಿನಲ್ಲಿ ಪ್ರಯಾಣಿಸುವಾಗ ಅವರು ತಮ್ಮ ಸೊಂಟಕ್ಕೆ ಕಟ್ಟುಕೊಂಡಿದ್ದ ಬೆಲ್ಟ್ ಪರ್ಸ್ನಿಂದ 1 ಲಕ್ಷ ರೂಪಾಯಿ ಕಳುವಾಗಿತ್ತು. ಆ ಬಳಿಕ ಸುರೆಂದರ್ ಅವರು ಗ್ರಾಹಕ ವ್ಯವಹಾರಗಳ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ರೈಲ್ವೆ ಇಲಾಖೆಯಿಂದ ಸೇವೆ ನೀಡುವಲ್ಲಿ ದೋಷವಾಗಿದೆ ಎಂದು ಹೇಳಿ ಗ್ರಾಹಕ ವ್ಯಾಜ್ಯಗಳ ವೇದಿಕೆ ಸುರೆಂದರ್ ಅವರಿಗೆ 1 ಲಕ್ಷ ರೂಪಾಯಿ ನೀಡುವಂತೆ ರೈಲ್ವೆಗೆ ಸೂಚಿಸಿತ್ತು.
ಆ ಬಳಿಕ ರೈಲ್ವೆ ಇಲಾಖೆ ರಾಜ್ಯ ಮತ್ತು ರಾಷ್ಟ್ರೀಯ ಗ್ರಾಹಕ ವ್ಯವಹಾರಗಳ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರೂ ತಿರಸ್ಕಾರಗೊಂಡಿತ್ತು.
ADVERTISEMENT
ADVERTISEMENT