ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಕೆ ಇವತ್ತಿನಿಂದ ಆರಂಭವಾಗಲಿದೆ.
ಅರ್ಜಿ ಸಲ್ಲಿಕೆಗೆ ಲಾಗಿನ್ ಆಗಬೇಕಿರುವ ವೆಬ್ಸೈಟ್:
https://sevasindhugs.karnataka.gov.in/
ವೆಬ್ಸೈಟ್ಗೆ ಲಾಗಿನ್ ಆದ ಕೂಡಲೇ ಖಾತರಿ ಯೋಜನೆಗಳ ಕುರಿತು ಎಂಬ ಶೀರ್ಷಿಕೆ ಮೇಲೆ ಕ್ಲಿಕ್ ಮಾಡಬೇಕು. ಆಗ ಗೃಹಜ್ಯೋತಿ ಯೋಜನೆಯ ಅರ್ಜಿ ಲಿಂಕ್ ಓಪನ್ ಆಗುತ್ತದೆ.
ಮೊಬೈಲ್ನಲ್ಲಿ ಅರ್ಜಿ ಸಲ್ಲಿಸುವುದಾದರೆ ಎಡಭಾಗದಲ್ಲಿ ಕಾಣಿಸಿಕೊಳ್ಳುವ ಮೆನು ಮೇಲೆ ಕ್ಲಿಕ್ ಮಾಡಿ.
ADVERTISEMENT
ಸ್ಕ್ಯಾನ್ ಮಾಡಿಯೂ ಲಾಗಿನ್ ಆಗಬಹುದು:
ಈ ಕೆಳಗಿನ ಚಿತ್ರದಲ್ಲಿ ತೋರಿಸಿರುವ ಸ್ಕ್ಯಾನ್ ಮೇಲೂ ಸ್ಕ್ಯಾನ್ ಮಾಡಿದರೆ ಆಗ ಲಿಂಕ್ ಓಪನ್ ಆಗುತ್ತದೆ.
ಬೇಕಾಗಿರುವ ದಾಖಲೆಗಳು:
ಆಧಾರ್ ಕಾರ್ಡ್ ಸಂಖ್ಯೆ, ವಿದ್ಯುತ್ ಬಿಲ್ನಲ್ಲಿ ತೋರಿಸಿರುವ ಆರ್ ಆರ್ ಸಂಖ್ಯೆ ಮತ್ತು ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಅರ್ಜಿ ಸಲ್ಲಿಸುವ ವೇಳೆ ಜೋಡಿಸಬೇಕಾಗುತ್ತದೆ.
ಬಾಡಿಗೆದಾರರಿಗೂ ಆಧಾರ್ ಕಾರ್ಡ್ ಸಾಕು:
ಇಂಧನ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ ಬಾಡಿಗೆದಾರರು ತಾವು ವಾಸವಿರುವ ಮನೆಯ ವಿದ್ಯುತ್ ಮೀಟರ್ನ ಆರ್ ಆರ್ ಸಂಖ್ಯೆಯ ಜೊತೆಗೆ ಆಧಾರ್ ಸಂಖ್ಯೆಯನ್ನು ಜೋಡಿಸಿದರೆ ಸಾಕು, ಬಾಡಿಗೆ ಕರಾರು ಪತ್ರದ ಅಗತ್ಯವಿಲ್ಲ.
ನಾವು ಈ ಸುದ್ದಿಯನ್ನು ಬರೆಯವ ವೇಳೆಗೆ ಇನ್ನೂ ಅರ್ಜಿ ಸ್ವೀಕಾರ ಆರಂಭವಾಗಿರಲಿಲ್ಲ.
ಉಳಿದ ಗ್ಯಾರಂಟಿಗಳಿಗೂ ಇಲ್ಲೇ ಅರ್ಜಿ:
ಗೃಹ ಲಕ್ಷ್ಮೀ, ಉಚಿತ ಬಸ್ ಪಾಸ್ಗಾಗಿ ಶಕ್ತಿ ಕಾರ್ಡ್ಗಾಗಿ ಅರ್ಜಿ ಮತ್ತು ಯುವ ನಿಧಿಗಾಗಿ ಅರ್ಜಿಯನ್ನು ಈ ಪೋರ್ಟಲ್ನಲ್ಲೇ ಸಲ್ಲಿಕೆ ಮಾಡಬೇಕು.
ಆದರೆ ಈ ಮೂರು ಗ್ಯಾರಂಟಿಗಳಿಗೆ ಅರ್ಜಿ ಸಲ್ಲಿಕೆ ಆರಂಭಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈಗಾಗಲೇ ಉಚಿತ ಬಸ್ ಪ್ರಯಾಣ ಯೋಜನೆ ಜೂನ್ 11ರಿಂದಲೇ ಜಾರಿಗೆ ಬಂದಿದೆ.
ADVERTISEMENT