ADVERTISEMENT
ಖೋಖೋ ಆಟದ ವೇಳೆ ಆಯತಪ್ಪಿ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹರದನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ.
9ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ಶಶಾಂತ್ ಮೃತಪಟ್ಟ ವಿದ್ಯಾರ್ಥಿ.
ಶಾಲೆ ಸಮಯ ಮುಗಿದ ನಂತರ ಖೋಖೋ ಆಟ ಅಭ್ಯಾಸ ಮಾಡುತ್ತಿದ್ದ ವೇಳೆ ಶಶಾಂಕ್ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.
ತಕ್ಷಣವೇ ಹುಡುಗನನ್ನು ಹೆಚ್ ಡಿ ಕೋಟೆ ತಾಲೂಕಿನ ಹಂಪಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮೈಸೂರಲ್ಲಿರುವ ಕೆ ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಆದರೆ ಬಾಲಕ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ.
ಈ ಬಾಲಕ ಹರದನಹಳ್ಳಿ ಗ್ರಾಮದ ಎಚ್.ಎಸ್. ಪಾಪಣ್ಣ ಮತ್ತು ಕುಮಾರಿ ದಂಪತಿ ಪುತ್ರ.
ಆಯತಪ್ಪಿ ಬಿದ್ದಿರುವುದು ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ.
ADVERTISEMENT