ADVERTISEMENT
ಇದು ಅಚ್ಚರಿಯಾದರೂ ನಿಜ..
ಪುರಿ ಜಗನ್ನಾಥನಿಗೆ… ಆತನ ಅಣ್ಣ ಬಲರಾಮನಿಗೆ, ತಂಗಿ ಸುಭದ್ರೆಗೆ ಜ್ವರ ಬಂದಿದೆ.. ಅದಕ್ಕೆ ಈ ದೇವಾಲಯದಲ್ಲಿ 15 ದಿನ ದೇವರ ದರ್ಶನ ನಿಲ್ಲಿಸಲಾಗಿದೆ.
ಇದು ನಿಜ.. ಪ್ರತಿ ವರ್ಷ ಪುರಿ ಜಗನ್ನಾಥನಿಗೆ ಜ್ವರ ಬರುತ್ತೆ.. ಜ್ವರದಿಂದ ದೇವರು ಚೇತರಿಸಿಕೊಳ್ಳುವವರೆಗೂ ದರ್ಶನಗಳಿರಲ್ಲ. ಪೂಜೆಗಳು ಇರಲ್ಲ.. ಜ್ವರ ಇಳಿದ ಮೇಲೆಯೇ ಎಲ್ಲಾ..
ಜ್ಯೇಷ್ಠ ಮಾಸ ಹುಣ್ಣಿಮೆ ದಿನ ( ಜೂನ್ 4) ಜಗನ್ನಾಥನು ಹುಟ್ಟಿದ ದಿನ ಎಂಬುದು ಭಕ್ತರ ನಂಬಿಕೆ. ಜಗನ್ನಾಥನ ರಥೋತ್ಸವ ಜೂನ್ 20ರಿಂದ ಶುರುವಾಗುತ್ತದೆ.
ಜಗನ್ನಾಥಸ್ವಾಮಿಯ ಹುಟ್ಟಿದ ದಿನವನ್ನು ಪುರಿಯಲ್ಲಿ ಸ್ನಾನಯಾತ್ರೆ ಇಲ್ಲವೇ ಸ್ನಾನ ಹುಣ್ಣಿಮೆ ಎಂದು ಕರೆಯಲಾಗುತ್ತದೆ.
ಆ ದಿನ ಪುರಿ ಮಂದಿರ ಮೂಲ ವಿರಾಟ್ ವಿಗ್ರಹಕ್ಕೆ 108 ಕೊಡಗಳಿಂದ ಅಭಿಷೇಕ ಮಾಡುತ್ತಾರೆ. ಅಭಿಷೇಕದ ನಂತರ ದೇವರನ್ನು ಗಜವೇಷಧಾರಿಯನ್ನಾಗಿ ಅಲಂಕರಿಸಲಾಗುತ್ತದೆ.
ಆದರೆ, 108 ಕೊಡಗಳ ನೀರಿಂದ ದೇವರಿಗೆ ಅಭಿಷೇಕ ಮಾಡುವ ವೈದಿಕರು, ಪುರಿ ಜಗನ್ನಾಥನಿಗೆ ಜ್ವರ ಬಂದಿದೆ ಎಂದು ಘೋಷಿಸುತ್ತಾರೆ
ಪುರಿ ದೇಗುಲದ ಪ್ರಾಂಗಣದಲ್ಲಿ ಚಿನ್ನದ ಬಾವಿಯೊಂದಿದೆ. ಶೀತಲಾದೇವಿ ಆ ಬಾವಿಯನ್ನು ಕಾಪಾಡುತ್ತಾಳೆ ಎಂಬುದು ನಂಬಿಕೆ.
ಈ ಬಾವಿಯನ್ನು ವರ್ಷಕ್ಕೊಮ್ಮೆ ತೆರೆದು ಅದರಲ್ಲಿನ ಪವಿತ್ರ ಜಲದಿಂದ ದೇವರಿಗೆ ಅಭಿಷೇಕ ಮಾಡುತ್ತಾರೆ.
ಆ ದಿನ ಗರ್ಭಗುಡಿಯಿಂದ ಮೂಲ ಮೂರ್ತಿಗಳನ್ನು ತಂದು ಸ್ನಾನವೇದಿ ಎಂಬ ಕಡೆ ಭಕ್ತರಿಗೆ ಕಾಣುವಂತೆ ಇರಿಸಿ ಅಭಿಷೇಕ ಮಾಡುತ್ತಾರೆ.
ನೀರಲ್ಲಿ ನೆಂದರೇ ನಮಗೂ ನೆಗಡಿ ಆಗುತ್ತದೆ ಅಲ್ವಾ.. ಹಾಗೆಯೇ ದೇವರಿಗೂ ಕೂಡ. ಆಗ ನಮಗೆ ಮಾಡಿದಂತೆ, ದೇವರ ಮೇಲಿನ ಆಭರಣಗಳನ್ನು ತೆಗೆದು ಮಫ್ಲರ್ ಸುತ್ತಲಾಗುತ್ತದೆ.
ಗಭಗುಡಿಯ ರತ್ನವೇದಿಗೆ ಎಡ ಭಾಗದಲ್ಲಿರುವ ಖಾಲಿ ಸ್ಥಳದಲ್ಲಿ ವಿಗ್ರಹಗಳನ್ನು ಮಲಗಿಸಲಾಗುತ್ತದೆ.
15 ದಿನ ಆರೈಕೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ದೇವರಿಗೆ ನೈವೇದ್ಯವನ್ನು ಕೊಡಲ್ಲ. ನೈವೇದ್ಯದ ಬದಲಿಗೆ ದೇವರಿಗೆ ಆಯುರ್ವೇದ ಔಷಧಿಗಳನ್ನು ಇಡಲಾಗುತ್ತದೆ.
ಈ 15 ದಿನಗಳನ್ನು ಅನಸಾರ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರಿಗಾಗಿ ಗರ್ಭಗುಡಿಯಲ್ಲಿ ಜಗನ್ನಾಥನ ಪೇಂಟಿಂಗ್ಗಳನ್ನು ಪ್ರದರ್ಶಿಸುತ್ತಾರೆ.
15 ದಿನಗಳ ಬಳಿಕ ದೇವರು ಜ್ವರದಿಂದ ಚೇತರಿಸಿಕೊಂಡಿದ್ದಾರೆ ಎಂದು ರಾಜವೈದ್ಯ ಪ್ರಕಟಿಸುತ್ತಾರೆ
ಅಭಿಷೇಕದಿಂದ ವಿಗ್ರಹಗಳ ಕಾಂತಿ ಬದಲಾಗಿರುತ್ತದೆ.. ಹೀಗಾಗಿ ಹೊಸ ಬಣ್ಣಗಳನ್ನು ವಿಗ್ರಹಗಳಿಗೆ ಬಳಿಯುತ್ತಾರೆ.
ಪುರಿ ಜಗನ್ನಾಥ ಮಂದಿರದಲ್ಲಿ ಇರುವ ದೇವರನ್ನು ಭಕ್ತರು ವಿಗ್ರಹ ಎಂದು ಭಾವಿಸಲ್ಲ.. ವಿಗ್ರಹವನ್ನು ದೇವರ ಶರೀರ ಎಂದು ಭಾವಿಸುತ್ತಾರೆ..
ವಿಗ್ರಹದಲ್ಲಿ ಇರಿಸಿರುವ ರಹಸ್ಯ ವಸ್ತುವನ್ನು ಹೃದಯ, ಆತ್ಮ ಎಂದು ಭಕ್ತರು ನಂಬುತ್ತಾರೆ.
ಈ ದೇವರ ವಿಗ್ರಹಕ್ಕೆ ನಿತ್ಯ ಬೆಳಗ್ಗೆ ಹಲ್ಲುಜ್ಜಲಾಗುತ್ತದೆ(ದಂತಧಾವನಂ).
ಬುಧವಾರ ಸಂಜೆ ಹೊತ್ತಲ್ಲಿ ವಿಗ್ರಹಕ್ಕೆ ಶೇವಿಂಗ್ (ಕ್ಷೌರಕರ್ಮ) ಮಾಡಲಾಗುತ್ತದೆ.
ಸಾಮಾನ್ಯವಾಗಿ ಹಿಂದೂ ನಂಬಿಕೆ ಪ್ರಕಾರ ದೇವಾಲಯದಲ್ಲಿ ಒಮ್ಮೆ ಪ್ರತಿಷ್ಠಾಪಿಸಿದ ವಿಗ್ರಹವನ್ನು ಸ್ಥಾನಪಲ್ಲಟ ಮಾಡಲ್ಲ. ಆದರೆ, ಇಲ್ಲಿ ಹಾಗಲ್ಲ..
ಪುರಿ ಮಂದಿರದಲ್ಲಿ ಪ್ರತಿಷ್ಠಾಪಿಸುವುದು ಮರದಿಂದ ಕೆತ್ತನೆ ಮಾಡಿದ ವಿಗ್ರಹ.
12ರಿಂದ 19ವರ್ಷಗಳಿಗೊಮ್ಮೆ ಹಳೆಯ ವಿಗ್ರಹವನ್ನು ತೆಗೆದು ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ.
ವಿಶೇಷ ಅಂದರೇ, ಪುರಿಯ ಮೂಲ ವಿರಾಟ್ ವಿಗ್ರಹಕ್ಕೆ ಕೈ-ಕಾಲುಗಳು ಇರಲ್ಲ.
ವಿಗ್ರಹ ಬದಲಿಸುವಾಗ ವೈದಿಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಳೆ ವಿಗ್ರಹದಲ್ಲಿರುವ ರಹಸ್ಯ ವಸ್ತುವನ್ನು ಹೊಸ ವಿಗ್ರಹದಲ್ಲಿ ಇರಿಸುತ್ತಾರೆ.
ಇದನ್ನು ಸಾಕ್ಷತ್ ಶ್ರೀಕೃಷ್ಣನ ಹೃದಯ ಎಂದೇ ಹೇಳಲಾಗುತ್ತದೆ.
ಸಾಮಾನ್ಯವಾಗಿ ಒಂದೇ ರಥವನ್ನು ಹತ್ತಾರು ವರ್ಷಗಳ ಕಾಲ ಎಲ್ಲಾ ದೇವಾಲಯಗಳಲ್ಲಿ ಬಳಸುತ್ತಾರೆ.
ADVERTISEMENT