ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅಮಾಟೆ ವಿಕ್ರಂ ಅವರನ್ನು ವರ್ಗಾವಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸಿ ಬಿ ರಿಷ್ಯಂತ್ ಅವರನ್ನು ಸರ್ಕಾರ ವರ್ಗಾಯಿಸಿದೆ.
ಡಾ ಕೆ ರಾಮಚಂದ್ರರಾವ್: ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ಫೋರ್ಸ್ ಎಡಿಜಿಪಿಯಾಗಿದ್ದ ಇವರನ್ನು ಕರ್ನಾಟಕ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ.
ಮಾಲಿನಿ ಕೃಷ್ಣಮೂರ್ತಿ: ಆಂತರಿಕ ಭದ್ರತೆಯ ಎಡಿಜಿಪಿ ಆಗಿದ್ದ ಇವರನ್ನು ಬಂಧಿಖಾನೆ ಎಡಿಜಿಪಿ ಆಗಿ ವರ್ಗಾಯಿಸಲಾಗಿದೆ.
ಅರುಣ್ ಚಕ್ರವರ್ತಿ: ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಇವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ.
ಮನೀಶ್ ಕರ್ಬಿಕರ್: ಬಂಧಿಖಾನೆ ಎಡಿಜಿಪಿಯಾಗಿದ್ದ ಇವರನ್ನು ಸಿಐಡಿ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ.
ಎಂ ಚಂದ್ರಶೇಖರ್: ಬೆಂಗಳೂರು ಪೂರ್ವ ಎಸಿಪಿಯಾಗಿದ್ದ ಇವರನ್ನು ಬಡ್ತಿ ನೀಡಿ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ.
ವಿಪುಲ್ ಕುಮಾರ್: ಆಂತರಿಕ ಭದ್ರತೆಯ ಐಜಿಪಿಯಾಗಿದ್ದ ಇವರನ್ನು ಬೆಂಗಳೂರು ಪೂರ್ವ ಎಸಿಪಿಯಾಗಿ ವ ರ್ಗಾಯಿಸಲಾಗಿದೆ.
ಪ್ರವೀಣ್ ಮಧುಕರ್ ಪವಾರ್: ದಕ್ಷಿಣ ವಲಯ ಐಜಿಪಿಯಾಗಿದ್ದ ಇವರನ್ನು ಸಿಐಡಿ ಐಜಿಪಿಯಾಗಿ ವರ್ಗಾಯಿಸಲಾಗಿದೆ.
ಸತೀಶ್ ಕುಮಾರ್: ಉತ್ತರ ವಲಯ ಐಜಿಪಿಯಾಗಿದ್ದ ಇವರನ್ನು ಬೆಂಗಳೂರು ಪಶ್ಚಿಮ ಐಜಿ ಮತ್ತು ಎಸಿಪಿಯಾಗಿ ವರ್ಗಾಯಿಸಲಾಗಿದೆ.
ಸಂದೀಪ್ ಪಾಟೀಲ್: ಬೆಂಗಳೂರು ಪಶ್ಚಿಮ ವಲಯ ಐಜಿಪಿ ಮತ್ತು ಎಸಿಪಿಯಾಗಿದ್ದ ಇವರನ್ನು ಕರ್ನಾಟಕ ಮೀಸಲು ಪೊಲೀಸ್ ಪಡೆಯ ಐಜಿಪಿಯಾಗಿ ವರ್ಗಾಯಿಸಲಾಗಿದೆ.
ವಿಕಾಶ್ ಕುಮಾರ್ ವಿಕಾಶ್: ಎಂಎಸ್ಐಎಲ್ ಎಂಡಿಯಾಗಿದ್ದ ಇವರನ್ನು ಆಂತರಿಕ ಭದ್ರತೆಯ ಐಜಿಪಿಯಾಗಿ ನೇಮಿಸಲಾಗಿದೆ.
ರಮಣ ಗುಪ್ತ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಇವರನ್ನು ಉತ್ತರ ವಲಯದ ಐಜಿಪಿಯಾಗಿ ವರ್ಗಾಯಿಸಲಾಗಿದೆ.
ಎಸ್ ಎನ್ ಸಿದ್ದರಾಮಪ್ಪ: ಹುದ್ದೆಗಾಗಿ ಕಾಯುತ್ತಿದ್ದ ಇವರನ್ನು ಮುಖ್ಯ ಕಚೇರಿ-1ರ ಐಜಿಪಿಯಾಗಿ ನೇಮಿಸಲಾಗಿದೆ.
ಡಾ ಎಂ ಬಿ ಬೋರಲಿಂಗಯ್ಯ: ಬೆಳಗಾವಿ ಪೊಲೀಸ್ ಆಯುಕ್ತರಾಗಿದ್ದ ಇವರನ್ನು ದಕ್ಷಿಣ ವಲಯ ಡಿಐಜಿಯಾಗಿ ವರ್ಗಾಯಿಸಲಾಗಿದೆ.
ಸಿ ವಂಶಿಕೃಷ್ಣ: ಹುದ್ದೆಗಾಗಿ ಕಾಯುತ್ತಿದ್ದ ಇವರನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ADVERTISEMENT
ADVERTISEMENT