ಕಾಲ್ನಡಿಗೆ ಮೂಲಕ ತಿರುಮಲಕ್ಕೆ ತೆರಳುವ ಅಲಿಪಿರಿ ಮಾರ್ಗದಲ್ಲಿ ಗುರುವಾರ ರಾತ್ರಿ ನಾಲ್ಕು ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆದ ನಂತರ ಟಿಟಿಡಿ ಎಚ್ಚೆತ್ತಿದೆ.
ಭಕ್ತರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಹಲವು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಟಿಟಿಡಿ ಮುಂದಾಗಿದೆ.
ಟಿಟಿಡಿ ನಿರ್ಣಯಗಳು
* ಇಡೀ ರಾತ್ರಿ ಅಲಿಪಿರಿ ಮಾರ್ಗ ಓಪನ್ ಇರಲ್ಲ
* ರಾತ್ರಿ 10 ಗಂಟೆಯವರೆಗೂ ಮಾತ್ರ ಅಲಿಪಿರಿ ಮಾರ್ಗದಲ್ಲಿ ಅವಕಾಶ
* ಸಂಜೆ ಆರು ಗಂಟೆಯವರೆಗೂ ಶ್ರೀವಾರಿ ಮೆಟ್ಟಿಲು ಮಾರ್ಗದಲ್ಲಿ ಭಕ್ತರಿಗೆ ಅವಕಾಶ
* ರಾತ್ರಿ 7 ಗಂಟೆ ನಂತರ ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ ಗಾಳಿಗೋಪುರದದಿಂದ 200 ಭಕ್ತರನ್ನು ಒಂದು ತಂಡವಾಗಿ ಕಳಿಸುವುದು
* ಈ 200 ಭಕ್ತರ ತಂಡಕ್ಕೆ ಓರ್ವ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದು
* ಭಕ್ತರು ಗೋವಿಂದ ನಾಮಸ್ಮರಣೆ ಮಾಡುತ್ತಾ ಮುಂದಕ್ಕೆ ಸಾಗಬೇಕು
* ಚಿಕ್ಕಮಕ್ಕಳು ಗುಂಪಿನ ನಡುವೆ ಸಾಗಬೇಕು
* ಶ್ರೀವಾರಿ ಮೆಟ್ಟಿಲು, ಅಲಿಪಿರಿ ಮಾರ್ಗದಲ್ಲಿ ಎರಡು ಕಡೆಯೂ ಬೇಲಿ ನಿರ್ಮಾಣ
ADVERTISEMENT
ADVERTISEMENT