ಮೂರ್ಛೆ ಬಂದ ವ್ಯಕ್ತಿಯ ಕೈಗೆ ಅಕ್ಕ ಪಕ್ಕ ಇದ್ದವರು ಕೈಗೆ ಬೀಗದ ಕೈಯನ್ನೋ, ಕಬ್ಬಿಣದ ವಸ್ತುವನ್ನೋ ನೀಡಿ ಬಿಗಿಯಾಗಿ ಹಿಡಿದುಕೊಳ್ಳುತ್ತಾರೆ. ಆದರೆ, ಹೀಗೆ ಮಾಡಬಾರದು..
ಬದಲಿಗೆ. ಯಾರಾದರೂ ಮೂರ್ಛೆರೋಗದಿಂದ ಬಳಲುತ್ತಿದ್ದಲ್ಲಿ ಕೂಡಲೇ ಅವರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳಿಸಬೇಕು.
ಮೂರ್ಛೆ ಬಂದು ಬಿದ್ದು ಹೋದ ಸಂದರ್ಭದಲ್ಲಿ, ಒದ್ದಾಡಿದ ಸಂದರ್ಭದಲ್ಲಿ ಅವರಿಗೆ ಗಾಯಗಳಾಗಿವೆಯೇ ಎಂಬುದನ್ನು ಮೊದಲು ಗಮನಿಸಬೇಕು. ಗಾಯಗಳು ಆಗಿದ್ದಲ್ಲಿ ರಕ್ತಸ್ರಾವ ತಪ್ಪಿಸಲು ಹತ್ತಿ ಅಥವಾ ವಸ್ತ್ರದಿಂದ ಬಿಗಿಯಾಗಿ ಹಿಡಿದುಕೊಳ್ಳಬೇಕು.
ತಲೆಯ ಕೆಳಗೆ ಸ್ವಲ್ಪ ಎತ್ತರದಿಂದ ಇರುವಂತೆ ದಿಂಬು ಅಥವಾ ಏನನ್ನಾದರೂ ಇಡಬೇಕು.
ಅಗತ್ಯವಿರುವಷ್ಟು ಗಾಳಿ ಆಡುವಂತೆ ನೋಡಿಕೊಳ್ಳಬೇಕು.
ವಾಂತಿ ಆದಲ್ಲಿ ಅದನ್ನು ನುಂಗದಂತೆ ನೋಡಿಕೊಳ್ಳಬೇಕು. ತಲೆಯನ್ನು ಪಕ್ಕಕ್ಕೆ ವಾಲಿರುವ ರೀತಿಯಲ್ಲಿ ಮಲಗಿಸಬೇಕು.
ಯಾವುದೇ ಹಂತದಲ್ಲಿ ಮೂರ್ಛೆಯನ್ನು ತಡೆಯುವ ಪ್ರಯತ್ನ ಮಾಡಬಾರದು.
ನೆತ್ತಿ ಮೇಲೆ ನುರು ಹಾಕುವುದು.. ಪೊರಕೆಯಲ್ಲಿ ಹೊಡೆಯುವುದು ಒಳ್ಳೆಯದಲ್ಲ.
ಬಲವಂತವಾಗಿ ನೀರನ್ನು ಕುಡಿಸಬಾರದು.. ಇದು ಅಪಾಯಕಾರಿ ಆಗಬಹುದು.
ಮೂರ್ಛೆ ನಿಯಂತ್ರಣಕ್ಕೆ ಬರುವವರೆಗೂ ಆ ವ್ಯಕ್ತಿಯ ಚಟುವಟಿಕೆಯನ್ನು ಗಮನಿಸಬೇಕು.
ಮೂರ್ಛೆ ನಿಯಂತ್ರಣಕ್ಕೆ ಬಂದ ನಂತರ ತಿನ್ನೋಕೆ, ಕುಡಿಯೋಕೆ ಏನನ್ನಾದರೂ ನೀಡಬೇಕು.
ಆ ವ್ಯಕ್ತಿಯ ಬಳಿಯ ಗುರುತಿನ ಚೀಟಿಯನ್ನು ಗಮನಿಸಿ, ಫೋನ್ ಇದ್ದಲ್ಲಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಬೇಕು.
ಪರಿಸ್ಥಿತಿ ಗಂಭೀರವಾಗಿದ್ದಲ್ಲಿ ಸನಿಹದ ಆಸ್ಪತ್ರೆಗೆ ದಾಖಲಿಸಬೇಕು.
ಕುಟುಂಬ ಸದಸ್ಯರು ಇರುವವರೆಗೂ ಅಲ್ಲಿಯೇ ಇದ್ದು ವೈದ್ಯೋಪಚಾರ ಮಾಡಿಸುವುದು ಒಳಿತು. ಹೀಗೆ ಮಾಡಿದಲ್ಲಿ ಮೂರ್ಛಿತ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗುವ ಸಂಭವ ಇರುತ್ತದೆ
ADVERTISEMENT
ADVERTISEMENT