ಐಸಿಸಿ ಏಕದಿನ ವಿಶ್ವಕಪ್ ಕ್ವಾಲಿಫೈಯರ್ಸ್ 2023ನಲ್ಲಿ ವೆಸ್ಟ್ ಇಂಡೀಸ್ಗೆ ನೆದರ್ಲೆಂಡ್ ಬಿಗ್ ಶಾಕ್ ಕೊಟ್ಟಿದೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಮೊದಲು ಸ್ಕೋರ್ ಸಮ ಮಾಡಿದ ಡಚ್ ತಂಡ, ಸೂಪರ್ ಓವರ್ನಲ್ಲಿ ಸಂಚಲನಾತ್ಮಕ ವಿಜಯ ಸಾಧಿಸಿದೆ.
ನೆದರ್ಲೆಂಡ್ ಬೌಲರ್ ಲೋಗನ್ ವ್ಯಾನ್ ಬಿಕ್ ಸೂಪರ್ ಓವರ್ನಲ್ಲಿ ಸತತವಾಗಿ 4,6,4,6,6,4 ರನ್ ಬಾರಿಸಿ ಸೆನ್ಸೇಷನಲ್ ಇನ್ನಿಂಗ್ಸ್ ಆಡಿ ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟರು
ಪೂರನ್ ಸೆಂಚುರಿ ವ್ಯರ್ಥ
ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ವಿಂಡೀಸ್ಗೆ ಓಪನರ್ಗಳಾದ ಬ್ರಾಂಡನ್ ಕಿಂಗ್(76), ಚಾರ್ಲ್ಸ್(54) ಅರ್ಧಶತಕಗಳ ಮೂಲಕ ಉತ್ತಮ ಆರಂಭ ನೀಡಿದರು.
ಕ್ಯಾಪ್ಟನ್ ಶಾಯ್ ಹೋಪ್ 47 ರನ್ ಬಾರಿಸಿದರೇ, ಐದನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಬಂದ ನಿಕೋಲಸ್ ಪೂರನ್ ಭರ್ಜರಿ 104 ರನ್ ಸಿಡಿಸಿ ಅಜೇಯರಾಗಿ ಉಳಿದರು. ಕೊನೆಯಲ್ಲಿ ಕಿಮೋಪಾಲ್ ಮಿಂಚಿನ ಇನ್ನಿಂಗ್ಸ್ ಆಡಿದರು. 25 ಎಸೆತಗಳಲ್ಲಿ 46 ರನ್ ಬಾರಿಸಿದರು. ಇದರೊಂದಿಗೆ ವಿಂಡೀಸ್ ನಿಗದಿತ ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್ ಗಳಿಸಿತು.
ಆಂಧ್ರ ಮೂಲದ ತೇಜ.. ಸೆಂಚುರಿಯ ತೇಜಸ್ಸು
ವಿಂಡೀಸ್ ನೀಡಿದ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ಆರಂಭದಲ್ಲಿ ತಡಬಡಾಯಿಸಿದರೂ, ಆಂಧ್ರ ಮೂಲದ ಬ್ಯಾಟರ್ ತೇಜ ನಿಡಮನೂರು ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಇನ್ನಿಂಗ್ಸ್ ಅನ್ನು ಸರಿಯಾದ ಹಳಿಗೆ ತಂದರು.76 ಎಸೆತಗಳಲ್ಲಿ 111 ರನ್ ಸಿಡಿಸಿದರು. ಕ್ಯಾಪ್ಟನ್ ಸ್ಕಾಟ್ ಎಡ್ವರ್ಡ್ಸ್ 67 ರನ್ ಬಾರಿಸಿ ಮಿಂಚಿದರು. ಕೊನೆಯಲ್ಲಿ ಲೋಗನ್ ವ್ಯಾನ್ ಬಿಕ್(28), ಆರ್ಯನ್ ದತ್(16) ಮಿಂಚಿನಂತೆ ರನ್ ಹೊಳೆ ಸುರಿಸಿದಾಗ ಎರಡು ತಂಡಗಳ ಸ್ಕೋರ್ ಸಮ ಆಯ್ತು.
ಬೌಲರ್ನ ಬ್ಯಾಟಿಂಗ್ ವಿಶ್ವರೂಪ
ಪಂದ್ಯ ಟೈ ಆದ ಕಾರಣ ಫಲಿತಾಂಶಕ್ಕಾಗಿ ಸೂಪರ್ ಓವರ್ ನಿರ್ವಹಿಸಿದರು. ಬೌಲರ್ ವ್ಯಾನ್ಬಿಕ್ ಬ್ಯಾಟಿಂಗ್ನಲ್ಲಿ ವಿಶ್ವರೂಪ ತೋರಿಸಿದರು. ಜೇಸನ್ ಬೌಲಿಂಗ್ನಲ್ಲಿ 4,6,4,6,6,4… ಹೀಗೆ 30 ರನ್ ಬಾರಿಸಿದರು. ನಂತರ ಬೌಲಿಂಗ್ನಲ್ಲಿಯೂ ಮಿಂಚಿದ ವ್ಯಾನ್ಬಿಕ್ 2ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
32 ವರ್ಷದ ಈ ರೈಟ್ ಆರ್ಮ್ ಪೇಸರ್ ಬೌಲಿಂಗ್ನಲ್ಲಿ ಚಾರ್ಲ್ಸ್ ಮೊದಲು ಸಿಕ್ಸ್ ಹೊಡದರೇ, ಎರಡನೇ ಎಸೆತದಲ್ಲಿ ಸಿಂಗಲ್ ಬಂತು. ಆದರೆ, 3, 4 ಎಸೆತದಲ್ಲಿ ಚಾರ್ಲ್ಸ್ ಮತ್ತು ಹೋಲ್ಡರ್ನನ್ನು ಔಟ್ ಮಾಡಿದರು. ಹೀಗೆ ಗೆಲುವು ಡಚ್ಚರ ಪಾಲಾಯಿತು. ವಿಂಡೀಸ್ ಪಡೆ ಕ್ರಿಕೆಟ್ ಶಿಶು ನೆದರ್ಲೆಂಡ್ ಕೈಯಲ್ಲಿ ಊಹಿಸಲಾಗದ ರೀತಿಯಲ್ಲಿ ಶಾಕ್ಗೆ ಗುರಿಯಾಯಿತು. ವ್ಯಾನ್ ಬಿಕ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.
ಕ್ವಾಲಿಫೈಯರ್ಸ್ನ ಗ್ರೂಪ್ ಎನಲ್ಲಿ ಜಿಂಬಾಬ್ವೆ, ನೆದರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಈಗಾಗಲೇ ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆದಿವೆ.
ADVERTISEMENT
ADVERTISEMENT