ಎಐಸಿಸಿ ಅಗ್ರ ನಾಯಕ ರಾಹುಲ್ ಗಾಂಧಿ ಜನರೊಟ್ಟಿಗೆ ಬೆರೆಯುತ್ತಿದ್ದು, ಅವರ ಕಷ್ಟ ಸುಖಗಳಿಗೆ ದನಿಯಾಗುವ ಕೆಲಸ ಮಾಡುತ್ತಿದ್ದಾರೆ. ಜನಸಾಮಾನ್ಯರು, ಅಸಮಘಟಿತ ವಲಯದ ಕಾರ್ಮಿಕರ ಸಮಸ್ಯೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದಾರೆ.
ಮಂಗಳವಾರ ಸಂಜೆ ದೆಹಲಿಯ ಕರೋಲ್ಬಾಗ್ನಲ್ಲಿರುವ ಬೈಕ್ ಮೆಕಾನಿಕ್ ಶಾಪ್ಗೆ ರಾಹುಲ್ ಗಾಂಧಿ ದಿಢೀರ್ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ಎರಡು ಗಂಟೆಗಳ ಕಾಲ ಅಲ್ಲಿಯೇ ಇದ್ದ ರಾಹುಲ್ ಗಾಂಧಿ ಕೆಲವು ಕ್ಷಣ ತಾವು ಕೂಡ ಬೈಕ್ ಮೆಕಾನಿಕ್ ಆದರು.
ಭಾರತವನ್ನು ನಿರ್ಮಿಸುತ್ತಿರುವುದು ಈ ಕೈಗಳು ಮತ್ತು ಈ ಬಟ್ಟೆಯ ಮೇಲಿನ ಮಸಿ.. ಈ ಕೈಗಳ ಬಗ್ಗೆ ನಮಗೆ ಹೆಮ್ಮೆಯಿದೆ.. ಈ ಕೆಲಸದ ಬಗ್ಗೆ ನಮಗೆ ಹೆಮ್ಮೆ ಇದೆ… ಭಾರತ್ ಜೋಡೋ ಯಾತ್ರೆ ಮುಂದುವರೆಯಲಿದೆ
ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ತಿಂಗಳ ಹಿಂದೆ ಹರಿಯಾಣದ ಅಂಬಾಲದಿಂದ ಶಿಮ್ಲಾವರೆಗೂ ಲಾರಿಯಲ್ಲಿ ಪಯಣಿಸಿ ಲಾರಿ ಚಾಲಕ ಮತ್ತು ಕ್ಲೀನರ್ಗಳ ಕಷ್ಟಗಳನ್ನು ತಿಳಿದುಕೊಂಡಿದ್ದರು.
ADVERTISEMENT
ಅಮೆರಿಕಾ ಪ್ರವಾಸದಲ್ಲಿ ಭಾರತ ಮೂಲಕ ಲಾರಿ ಚಾಲಕರ ಜೊತೆ ಸಂವಾದ ನಡೆಸಿದ್ದರು. ಲಾರಿಯ ಕ್ಯಾಬಿನ್ಗಳ ವ್ಯತ್ಯಾಸ, ಚಾಲಕ-ಕ್ಲೀನರ್ ವೇತನ, ಕೆಲಸದ ಅವಧಿ ಬಗ್ಗೆ ಕೇಳಿ ತಿಳಿದುಕೊಂಡಿದ್ದರು.
ADVERTISEMENT