ADVERTISEMENT
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ರೌಡಿ ಶೀಟರ್ನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಪಟ್ಟಣದ ಥಿಯೇಟರ್ ಬಳಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಚ್ಚು, ಲಾಂಗ್ ಬೀಸಿ ರೌಡಿ ಶೀಟರ್ ಮಾಸ್ತಿ ಗೌಡ ಎಂಬಾತನನ್ನು ಕೊಲೆ ಮಾಡಿದ್ದಾರೆ.
ರೌಡಿ ಶೀಟರ್ ಮಾಸ್ತಿಗೌಡ ಸ್ಥಳದಲ್ಲಿ ಬಲಿಯಾಗಿದ್ದಾನೆ. ಈತ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯವನು.
ಮಾಹಿತಿಗಳ ಪ್ರಕಾರ ಈತನಿಗೂ ಮತ್ತೋರ್ವ ರೌಡಿ ಶೀಟರ್ ಚೇತುಗೌಡ ಎಂಬಾತನಿಗೆ ದ್ವೇಷ ಇತ್ತು. ಚೇತು ಗೌಡನ ಕೊಲೆಗೂ ಮಾಸ್ತಿ ಗೌಡ ಪಿತೂರಿ ನಡೆಸಿದ್ದ. ಹೀಗಾಗಿ ಆ ದ್ವೇಷದಲ್ಲೇ ಚೇತುಗೌಡ ಗ್ಯಾಂಗ್ ಈ ಕೊಲೆ ಮಾಡಿರುವ ಶಂಕೆ ಪೊಲೀಸರದ್ದು.
ADVERTISEMENT